×
Ad

ಭಾರತೀಯ ಮೂಲದ ಪಾದ್ರಿ ನಾಪತ್ತೆ

Update: 2016-03-07 23:14 IST

ಏಡನ್,ಮಾ.7: ಯೆಮನ್‌ನ ವೃದ್ಧಾಶ್ರಮವೊಂದರ ಮೇಲೆ ಶಂಕಿತ ಐಸಿಸ್ ಉಗ್ರರು ದಾಳಿ ನಡೆಸಿದ ಘಟನೆಯ ಬಳಿಕ ಭಾರತೀಯ ಮೂಲದ ಕ್ರೈಸ್ತ ಧರ್ಮಗುರುವೊಬ್ಬರು ನಾಪತ್ತೆಯಾಗಿದ್ದಾರೆಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.

   ಯೆಮನ್‌ನ ದಕ್ಷಿಣ ಭಾಗದ ನಗರವಾದ ಏಡನ್‌ನಲ್ಲಿ ಮಿಶನರೀಸ್ ಆಫ್ ಚಾರಿಟೀಸ್ ಸಂಸ್ಥೆಯು ನಡೆಸುತ್ತಿದ್ದ ವೃದ್ಧಾಶ್ರಮದ ಮೇಲೆ ಶುಕ್ರವಾರ ದಾಳಿ ನಡೆಸಿದ ಉಗ್ರರು, ಅಲ್ಲಿ ಸೇವೆ ಸಲ್ಲಿಸುತ್ತಿದ್ದ 56 ವರ್ಷ ವಯಸ್ಸಿನ ಕ್ರೈಸ್ತ ಧರ್ಮಗುರು ಟಾಮ್ ಉಝುನಲಿಲ್ ಅವರನ್ನು ಅಪಹರಿಸಿ, ಅಜ್ಞಾತ ಸ್ಥಳಕ್ಕೆ ಕೊಂಡೊಯ್ದಿರುವುದಾಗಿ ಯೆಮನ್‌ನ ಭದ್ರತಾಧಿಕಾರಿಯೊಬ್ಬರು ತಿಳಿಸಿದ್ದಾರೆ. ‘‘ ಈ ಕ್ರಿಮಿನಲ್ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ವಹಿಸಿಲ್ಲ. ಆದರೆ ಈಗ ನಮಗೆ ಲಭಿಸಿರುವ ಮಾಹಿತಿ ಪ್ರಕಾರ ಇದರಲ್ಲಿ ಐಸಿಸ್ ಶಾಮೀಲಾಗಿರುವುದಾಗಿ ತಿಳಿದುಬಂದಿದೆ ಎಂದು ಯೆಮನ್ ಸರಕಾರದ ಮೂಲಗಳು ತಿಳಿಸಿವೆ.
ಶುಕ್ರವಾರ ಏಡನ್‌ನ ವೃದ್ಧಾಶ್ರಮದ ಮೇಲೆ ದಾಳಿ ನಡೆಸಿದ ಬಂದೂಕುಧಾರಿಗಳು 15 ಮಂದಿಯನ್ನು ಹತ್ಯೆಗೈದರೆಂದು ಅಧಿಕಾರಿಗಳು ತಿಳಿಸಿದ್ದಾರೆ. ವೃದ್ಧಾಶ್ರಮದಲ್ಲಿ ಸೇವೆ ಸಲ್ಲಿಸುತ್ತಿದ್ದ ಇತರ ನಾಲ್ವರು ಕ್ರೈಸ್ತ ಸನ್ಯಾಸಿನಿಯರನ್ನು ಕೂಡಾ ಹತ್ಯೆಗೈದಿದ್ದಾರೆ. ಮೃತ ಕ್ರೈಸ ಸನ್ಯಾಸಿನಿಯರಲ್ಲಿಒಬ್ಬಾಕೆ ಕೆನ್ಯ ಹಾಗೂ ಇನ್ನೊಬ್ಬರು ಭಾರತದವರೆಂದುತಿಳಿದುಬಂದಿದೆ ಆದರೆ ಆಶ್ರಮದ ಮುಖ್ಯಸ್ಥೆ ಉಗ್ರರ ದಾಳಿಯ ವೇಳೆ ಬಚ್ಚಿಟ್ಟುಕೊಂಡಿದ್ದರಿಂದ ಅವರು ಪಾರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News