×
Ad

ಅಲ್‌ಖಾಯಿದಾ ಸಂಬಂಧ: ಅಬುಧಾಬಿಯಲ್ಲಿ 21 ಮಂದಿಯ ವಿಚಾರಣೆ

Update: 2016-03-08 18:30 IST

ಅಬುಧಾಬಿ, ಮಾರ್ಚ್.8: ಯಮನ್‌ನ ಅಲ್‌ಖಾಯಿದಾದೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಶಂಕೆಯಲ್ಲಿ 23 ಮಂದಿಯ ವಿಚಾರಣೆ ಫೆಡರಲ್ ಕೋರ್ಟ್‌ನಲ್ಲಿ ಮುಂದುವರಿಯುತ್ತಿದೆ.

21 ಯಮನಿಗಳು ಮತ್ತು ಇಬ್ಬರು ಎಮರೇಟಿಗರ ವಿಚಾರಣೆ ನಡೆಯುತ್ತಿದ್ದು ಅಲ್‌ಖಾಯಿದಾಕ್ಕೆ ಸೇರಿದ್ದಾರೆಂದು ಆರೋಪಿಸಲಾಗಿದೆ. ಇವರಲ್ಲಿ ಕೆಲವರ ಮೇಲೆ ನಕಲಿ ಇಮಿಗ್ರೇಶನ್ ದಾಖಲೆಗಳನ್ನು ಸೃಷ್ಟಿಸಿದ ಆರೋಪವನ್ನೂ ಹೊರಿಸಲಾಗಿದೆ.ವಾಸ್ತವ್ಯ- ವಲಸೆ ಖಾತೆಯ ಅಧಿಕೃತ ಇಮಿಗ್ರೇಶನ್ ದಾಖಲೆಗಳನ್ನು ನಕಲಿಯಾಗಿ ಸೃಷ್ಟಿಸಲು ಸಂಚು ಹೂಡಿದ್ದರೆಂದು ಐವರು ಯಮನಿಗಳ ಮೇಲೆ ಆರೋಪ ಹೊರಿಸಲಾಗಿದೆ. ದೇಶವನ್ನು ಬಿಡುವುದು ಮತ್ತು ಪ್ರವೇಶಿಸುವುದಕ್ಕೆ ಸಂಬಂಧಿಸಿದ ಕಾನೂನುಗಳ ಬದಲಾಗಿ ಅಡ್ಡದಾರಿಯನ್ನು ಹಿಡಿಯಲು ಪ್ರಯತ್ನಿಸಿದ್ದಾರೆ ಎಂದೂ ಅವರ ವಿರುದ್ಧ ಪ್ರಾಸಿಕ್ಯೂಶನ್ ವಾದಿಸಿದೆ. ಆರೋಪಿ ಪರ ವಕೀಲರು ತಮ್ಮ ವಾದವನ್ನು ಮಂಡಿಸಲಿಕ್ಕಾಗಿ ಕೇಸನ್ನು ಮಾರ್ಚ್ 28ಕ್ಕೆ ವಿಸ್ತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News