ಇಪಿಎಫ್ ಮೇಲಿನ ತೆರಿಗೆ ಪ್ರಸ್ತಾವ ರದ್ದು ನನ್ನ ಒತ್ತಡ ಕೆಲಸ ಮಾಡಿತು : ರಾಹುಲ್ ಗಾಂಧಿ

Update: 2016-03-08 13:49 GMT

ಹೊಸದಿಲ್ಲಿ , ಮಾ. 8: ಇಪಿಎಫ್ ಖಾತೆಯಿಂದ ಹಿಂಪಡೆಯುವ ಹಣದ ಮೇಲೆ ತೆರಿಗೆ ವಿಧಿಸುವ ಪ್ರಸ್ತಾವವನ್ನು ಹಿಂದೆಗೆದುಕೊಂಡ ಕೇಂದ್ರ ಸರಕಾರದ ಕ್ರಮ ನನ್ನ ಒತ್ತಡದ ಫ಼ ಲಿತಾಂಶ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಕೂಡ ' ರಾಹುಲ್ ಅವರ ಒತ್ತಡಕ್ಕೆ ಮತ್ತೆ ಸರಕಾರ ಮಣಿದಿದೆ ' ಎಂದು ಹೇಳಿಕೊಂಡಿದೆ. 
ಸರಕಾರ ತನ್ನ ಪ್ರಸ್ತಾವವನ್ನು ಹಿಂದೆಗೆದುಕೊಂಡ ಬಳಿಕ ಟ್ವೀಟ್ ಮಾಡಿದ ರಾಹುಲ್, " ಸರಕಾರ ಜನರ ಆಕ್ರೋಶದ ಎದುರು ಮಣಿದಿದೆ. ಅದು ಸಂಪೂರ್ಣ ಅನ್ಯಾಯವಾಗಿತ್ತು. ಮಧ್ಯಮ ವರ್ಗದ ಲಕ್ಷಾಂತರ ಜನರ ಮೇಲೆ ಇಂತಹ ಹೊರೆ ಹಾಕುವುದು ನೈತಿಕವಾಗಿ ಸರಿಯಲ್ಲ " ಎಂದು ಹೇಳಿದ್ದಾರೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News