ಧಾರ್ಮಿಕ ಆಯೋಗದ ಸದಸ್ಯರಿಗೆ ವೀಸಾ ನಕಾರ ಅಮೆರಿಕಕ್ಕೆ ನಿರಾಶೆ
Update: 2016-03-08 23:11 IST
ವಾಶಿಂಗ್ಟನ್, ಮಾ. 8: ಅಮೆರಿಕದ ಧಾರ್ಮಿಕ ಆಯೋಗದ ಸದಸ್ಯರಿಗೆ ವೀಸಾ ನೀಡದಿರುವ ಭಾರತದ ನಿರ್ಧಾರದ ಬಗ್ಗೆ ಅಮೆರಿಕ ‘‘ನಿರಾಶೆ’’ ವ್ಯಕ್ತಪಡಿಸುತ್ತದೆ ಎಂದು ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಜಗತ್ತಿನಾದ್ಯಂತ ನಡೆಯುವ ಧಾರ್ಮಿಕ ಸ್ವಾತಂತ್ರದ ಉಲ್ಲಂಘನೆಗಳನ್ನು ಧಾರ್ಮಿಕ ಆಯೋಗ ಪರಿಶೀಲಿಸುತ್ತದೆ.
‘‘ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ ಆಯೋಗದ ಸದಸ್ಯರು ಮಾರ್ಚ್ 4ರಂದು ಭಾರತಕ್ಕೆ ಪ್ರಯಾಣಿಸಲು ಯೋಜನೆ ಹಾಕಿದ್ದರು. ಆದರೆ ಭಾರತೀಯ ರಾಯಭಾರ ಕಚೇರಿಯು ಅವರಿಗೆ ವೀಸಾ ನೀಡಲು ನಿರಾಕರಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಸುದ್ದಿ ಕೇಳಿ ನಮಗೆ ನಿರಾಶೆಯಾಗಿದೆ’’ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಜಾನ್ ಕಿರ್ಬಿ ಹೇಳಿದರು.