ವಿಜಯ ಮಲ್ಯಗೆ ಸುಪ್ರೀಂ ಕೋರ್ಟ್ ನೋಟಿಸ್; ಉತ್ತರಿಸಲು ಎರಡು ವಾರಗಳ ಕಾಲಾವಕಾಶ
Update: 2016-03-09 15:07 IST
ಹೊಸದಿಲ್ಲಿ, ಮಾ.9: ಮದ್ಯದ ದೊರೆ ವಿಜಯ್ ಮಲ್ಯಗೆ ಇಂದು ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ಎರಡು ವಾರಗಳ ಒಳಗಾಗಿ ಉತ್ತರಿಸುವಂತೆ ಆದೇಶ ನೀಡಿದೆ.
ಬ್ಯಾಂಕ್ ಒಕ್ಕೂಟಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ವಿಜಯ ಮಲ್ಯಗೆ ನೋಟಿಸ್ ಜಾರಿ ಮಾಡಿತು.
ವಿಜಯ್ ಮಲ್ಯ ವಿದೇಶದಲ್ಲಿದ್ದರೂ, ನೋಟಿಸ್ ಅವರಿಗೆ ತಲುಪಿಸಬೇಕು ಎಂದು ಹೇಳಿದ ಕೋರ್ಟ್ ಪ್ರಕರಣದ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿತು,
ವಿಜಯ್ ಮಲ್ಯಗೆ ದೇಶ ಬಿಟ್ಟು ತೆರಳದಂತೆ ಅವರ ಪಾಸ್ಪೋರ್ಟ್‌ನ್ನು ಮುಟ್ಟಗೋಲು ಹಾಕುವಂತೆ ಆದೇಶ ನೀಡುವಂತೆ ಬ್ಯಾಂಕ್ ಒಕ್ಕೂಟ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿತ್ತು.
ಮಲ್ಯ ಈಗಾಗಲೇ ದೇಶ ತೊರೆದಿರುವುದನ್ನು ಅಟಾರ್ನಿ ಜನರಲ್ ಮುಕುಲ್ ರೊಹ್ಟಗಿ ಸ್ಪಷ್ಟನೆ ನೀಡಿದರು.
ಮಲ್ಯ ಲಂಡನ್‌ನಲ್ಲಿದ್ದರೆ ಅಲ್ಲಿನ ನಗರ ಆಯುಕ್ತರ ಮೂಲಕ ನೋಟಿಸ್ ತಲುಪಿಸಿ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿತು