ಜಿ ಎಸ್ ಟಿ ಅನುಮೋದನೆ ಮಾಡಿಸಿ , ಅದಕ್ಕೆ ಕ್ರೆಡಿಟ್ ಪಡೆಯಿರಿ : ರಾಹುಲ್ ಗೆ ಬಿಜೆಪಿ ತಿರುಗೇಟು
ನವದೆಹಲಿ : ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಮೇಲೆ ತೆರಿಗೆ ವಿಧಿಸುವಪ್ರಸ್ತಾಪನ್ನು ಕೇಂದ್ರ ಸರಕಾರವು ತಾನು ಒತ್ತಡ ಹಾಕಿದ ಮೇಲಷ್ಟೇ ಹಿಂದಕ್ಕೆ ಪಡೆದುಕೊಂಡಿದೆಯೆಂಬ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಯನ್ನುಬಿಜೆಪಿ ಲೇವಡಿ ಮಾಡಿದ್ದು ಸರಕು ಸೇವಾ ತೆರಿಗೆ ಕೂಡ ಸಂಸತ್ತಿನಲ್ಲಿ ಅನುಮೋದನೆಗೊಂಡರೆ ಅದಕ್ಕೂ ತಾವೇ ಕಾರಣವೆಂದು ಅವರು ಹೇಳಿಕೊಳ್ಳಬಹುದು ಎಂದಿದೆ.
‘‘ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ಸರಕಾರ ತೆಗೆದುಕೊಳ್ಳುವ ಎಲ್ಲಾ ತೀರ್ಮಾನಗಳಿಗೂತಾವೇ ಕಾರಣವೆಂದು ಹೇಳಬಹುದು. ಅವರು ಸಂಸತ್ತಿನ ಸುಲಲಿತ ಕಾರ್ಯನಿರ್ವಹಣೆಗೆ ಸಹಾಯ ಮಾಡಿದರೆ ಇತರ ಮಸೂದೆಗಳ ಅನುಮೋದನೆಗೂ ಇದೇ ನೀತಿಯನ್ನು ಅನುಸರಿಸಬಹುದು. ಇವು ಬಿಜೆಪಿಯ ಮಸೂದೆಗಳಲ್ಲಿ ಬದಲಾಗಿ ದೇಶದ ಮಸೂದೆ,’’ಎಂದು ಪಕ್ಷ ಹೇಳಿಕೊಂಡಿದೆ.
ಜನರಿಗೆ ಜೀವನದಲ್ಲಿ ಭದ್ರತೆಯೊದಗಿಸಲು ತಾನು ಅಧಿಕಾರದಲ್ಲಿರುವಾಗ ಕಾಂಗ್ರೆಸ್ ಏನನ್ನೂ ಮಾಡಿರಲಿಲ್ಲ, ಎಂದು ರಾಹುಲ್ ಹೇಳಿಕೆಯನ್ನು ಖಂಡಿಸಿ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
‘ವಿಭಜನಾತ್ಮಕ’ ರಾಜಕೀಯದಿಂದ ದೂರವುಳಿಯುವಂತೆ ವಿಪಕ್ಷಗಳಿಗೆ ಮನವಿ ಮಾಡಿದ ಜೇಟ್ಲಿ ನಂತರ ರಾಹುಲ್ ಗಾಂಧಿ ಹಾಗೂ ಹಿಂದಿನ ಯುಪಿಎ ಸರಕಾರವನ್ನು ಇಶ್ರತ್ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಟೀಕಿಸಲು ಆರಂಭಿಸಿದರು.
ರಾಜ್ಯಸಭೆಯಲ್ಲಿರಾಷ್ಟ್ರಪತಿಯವರ ಭಾಷಣಕ್ಕೆ ಧನ್ಯವಾದ ಸಮರ್ಪಣೆಯ ಸಂದರ್ಭ ಚರ್ಚೆಯಲ್ಲಿ ಭಾಗವಹಿಸಿದ ಜೇಟ್ಲಿ, ಜೆಎನ್‌ಯು ವಿದ್ಯಾರ್ಥಿ ನಾಯಕ ಕನ್ಹಯ್ಯಾ ಕುಮಾರ್‌ನನ್ನು ಉಲ್ಲೇಖಿಸಿ ಎನ್‌ಡಿಎ ಸರಕಾರಕ್ಕೆ ಯಾವುದೇ ವಿದ್ಯಾರ್ಥಿಯ ವಿರುದ್ಧ ದ್ವೇಷವಿಲ್ಲವೆಂದು ಹೇಳುತ್ತಾ ಅದೇ ಸಮಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದೇಶವನ್ನು ವಿಭಜಿಸುವ ಸಲುವಾಗಿಉಪಯೋಗಿಸುವುದು ಸಲ್ಲದು ಎಂದರು.