×
Ad

"ಸಾವನ್ನು ಯಾರೂ ಟೀಕಿಸುವುದಿಲ್ಲ.. ಕಾಂಗ್ರೆಸ್‌ 'ಮೃತ್ಯು'ವಿನಂತೆ ಅದಕ್ಕೆ ಟೀಕೆ ತಾಗುವುದಿಲ್ಲ : ಮೋದಿ

Update: 2016-03-09 17:14 IST

ಹೊಸದಿಲ್ಲಿ, ಮಾ.9: ಸಾವು ವರ... ಸಾವನ್ನು ಯಾರೂ ಟೀಕಿಸುವುದಿಲ್ಲ. ಒಬ್ಬ ಸತ್ತರೆ ವೃದ್ಯಾಪ್ಯದಿಂದ, ಕ್ಯಾನ್ಸರ್‌ನ ಕಾರಣದಿಂದ  ಸಾವಿಗೀಡಾಗಿರುವುದಾಗಿ ಹೇಳುತ್ತಾರೆ. ಆದರೆ ಸಾವನ್ನು ಯಾರೂ ಟೀಕಿಸುವುದಿಲ್ಲ. ಸಾವಿನ ಕಾರಣದ ಬಗ್ಗೆ ಹೇಳುತ್ತಾರೆ. ಸಾವು ಟೀಕೆಯಿಂದ ಹೊರತಾಗಿದೆ. ಕಾಂಗ್ರೆಸ್‌ ಮೃತ್ಯುವಿನಂತೆ  ಆ ಪಕ್ಷಕ್ಕೆ ಟೀಕೆ ತಾಗುವುದಿಲ್ಲ "ಹೀಗೆಂದವರು ಪ್ರಧಾನ ಮಂತ್ರಿ ನರೇಂದ್ರ ಮೋದಿ .
ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡಿ ಮಾತನಾಡಿದ ಮೋದಿ  "ಇದೇ ಅವಕಾಶವನ್ನು ಕಾಂಗ್ರೆಸ್‌ ವಿರುದ್ಧ ದಾಳಿ ನಡೆಸಲು ಬಳಸಿಕೊಂಡರು. "ನಾವು ಕಾಂಗ್ರೆಸ್‌ನ್ನು ಟೀಕಿಸಿದರೆ ಅದು ವಿಪಕ್ಷವನ್ನು ಟೀಕಿಸಿದ ಅರ್ಥ ಬರುತ್ತದೆ. ಕಾಂಗ್ರೆಸ್‌ಗೆ ಟೀಕೆ ತಾಗುವುದಿಲ್ಲ. ಅದು ಯಾವತ್ತೂ ಕೆಟ್ಟ ಹೆಸರು ಅಂಟಿಕೊಳ್ಳದಂತೆ ದೂರ ಉಳಿಯುತ್ತದೆ" ಎಂದು ಮೋದಿ ಕುಟುಕಿದರು.
"ನಮ್ಮಲ್ಲಿ ಎರಡು ರೀತಿಯ ಜನರು ಇರುತ್ತಾರೆ. ಕೆಲವರು ಕೆಲಸ ಮಾಡುತ್ತಾರೆ.ಆ  ಕೆಲಸದ ಪ್ರಯೋಜನವನ್ನು ಇನ್ನೊಬ್ಬರು ಪಡೆಯುತ್ತಾರೆ.  ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಯಾರಾದರೂ ಕೆಲಸ ಮಾಡಿದರೆ ಅದರ ಪ್ರಯೋಜನ ಪಡೆಯುತ್ತಾರೆ ”  ಎಂದು ಮೋದಿ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News