ಯುಎಇಯಲ್ಲಿ ಭಾರೀ ಮಳೆ: ವಿಮಾನ ನಿಲ್ದಾಣ, ಶಾಲೆಗಳ ಮುಚ್ಚುಗಡೆ
ದುಬೈ, ಮಾ. 9: ಯುನೈಟಡ್ ಅರಬ್ ಎಮಿರೇಟ್ಸ್‌ನಲ್ಲಿ ಭಾರೀ ಮಳೆಯಾಗುತ್ತಿದ್ದು ಶಾಲೆಗಳನ್ನು ಮುಚ್ಚಲಾಗಿದೆ ಹಾಗೂ ಅಬುಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.
‘‘ತೀವ್ರ ಹವಮಾನ ಪರಿಸ್ಥಿತಿ’’ಯ ಹಿನ್ನೆಲೆಯಲ್ಲಿ ಇಂದು ವಿಮಾನ ಹಾರಾಟ ನಡೆಸಲಾಗುವುದಿಲ್ಲ ಎಂದು ಅಬುಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟ್ವಿಟರ್‌ನಲ್ಲಿ ಪ್ರಕಟಿಸಿದೆ. ಅದೇ ವೇಳೆ, ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೆಲವು ವಿಮಾನಗಳು ವಿಳಂಬವಾಗಿ ಹಾರಿವೆ.
ಈ ಮರುಭೂಮಿ ದೇಶದಲ್ಲಿ ಈ ಪ್ರಮಾಣದಲ್ಲಿ ಮಳೆಯಾಗುವುದು ಭಾರೀ ಅಪರೂಪವಾಗಿದೆ.
ಲಂಡನ್, ಮಾ. 9: ಸಿರಿಯದಲ್ಲಿ ಯುದ್ಧವಿರಾಮ ಜಾರಿಗೆ ಬಂದಿರುವ ಹೊರತಾಗಿಯೂ, ಮುತ್ತಿಗೆಗೊಳಗಾಗಿರುವ ದೇಶದ ‘‘ಬಯಲು ಬಂದೀಖಾನೆ’’ಗಳಲ್ಲಿ ಸುಮಾರು ಎರಡೂವರೆ ಲಕ್ಷ ಮಕ್ಕಳು ಹಸಿವಿನಿಂದ ನರಳುತ್ತಿದ್ದಾರೆ ಎಂದು ಮಕ್ಕಳನ್ನು ರಕ್ಷಿಸಿ ಎಂದು ಕರೆಕೊಡುವ ಅಭಿಯಾನ ‘ಸೇವ್ ದ ಚಿಲ್ಡ್ರನ್’ ಹೇಳಿದೆ.
ಅದೇ ವೇಳೆ, ಶಾಶ್ವತ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಬುಧವಾರ ಆರಂಭವಾಗಬೇಕಿದ್ದ ಶಾಂತಿ ಸಭೆಯ ಭವಿಷ್ಯ ಅಯೋಮಯವಾಗಿದೆ.