ಭಯೋತ್ಪಾದಕ ಗುಂಪುಗಳ ವಿರುದ್ಧ ಸಹಕಾರ: ಅಮೆರಿಕದೊಂದಿಗೆ ಜೈಶಂಕರ್ ಚರ್ಚೆ

Update: 2016-03-09 14:12 GMT

ವಾಶಿಂಗ್ಟನ್, ಮಾ.9: ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ್ತಿ ಸುಸಾನ್ ರೈಸ್‌ರನ್ನು ಭೇಟಿಯಾಗಿದ್ದಾರೆ. ಅವರು ದ್ವಿಪಕ್ಷೀಯ ಸಂಬಂಧ ಹಾಗೂ ಲಷ್ಕರೆ ತಯ್ಯಿಬಾ (ಎಲ್‌ಇಟಿ) ಹಾಗೂ ಜೈಷೆ ಮುಹಮ್ಮದ್ (ಜೆಇಎಂ) ಗಳಂತಹ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಸಹಕಾರರ ಕುರಿತು ಚರ್ಚೆ ನಡೆಸಿದ್ದಾರೆಂದು ಶ್ವೇತಭವನ ತಿಳಿಸಿದೆ.

 ರೈಸ್ ಹಾಗೂ ಜೈಸಂಕರ್ ವಾತಾವರಣ ಬದಲಾವಣೆ, ವ್ಯಾಪಾರ ಹಾಗೂ ರಕ್ಷಣೆಗಳ ಕುರಿತು ದ್ವಿಪಕ್ಷೀಯ ಸಂಬಂಧವನ್ನು ಬಲಗೊಳಿಸುವ ತಮ್ಮ ಬದ್ಧತೆಯನ್ನು ಖಚಿತಗೊಳಿಸಿದ್ದಾರೆ ಮತ್ತು ಮುಂದಿನ ಪರಮಾಣು ಭದ್ರತಾ ಸಮ್ಮೇಳನದ ಸಿದ್ಧತೆಯನ್ನು ಗಮನಿಸಿದ್ದಾರೆಂದು ಅದು ನಿನ್ನೆ ಹೇಳಿಕೆಯೊಂದನ್ನು ಹೊರಡಿಸಿತ್ತು.

ಅವರು, ಲಷ್ಕರೆ ತಯ್ಯಿಬಾ, ಜೈಷೆ ಮುಹಮ್ಮದ್ ಹಾಗೂ ಇತರ ಭಯೋತ್ಪಾದನಾ ಬೆದರಿಕೆಗಳ ಕುರಿತಾಗಿಯೂ ಚರ್ಚಿಸಿದರೆಂದು ಶ್ವೇತಭನವದ ರಾಷ್ಟ್ರೀಯ ಭದ್ರತಾ ಸಮಿತಿಯ ವಕ್ತಾರ ನೆಡ್ ಪ್ರೈಸ್ ತಿಳಿಸಿದ್ದಾರೆ.

ಭಾರತ ಹಾಗೂ ಅಮೆರಿಕಗಳ ಭಾಗಿದಾರಿಕೆಯನ್ನು 21ನೆ ಶತಮಾನಕ್ಕೆ ನಿರ್ಣಾಯಕ ಸಂಬಂಧವನ್ನಾಗಿಸುವ ಅವುಗಳ ನಾಯಕರ ಬದ್ಧತೆಯನ್ನು ಪೂರೈಸುವುದಕ್ಕೆ ಹಾಗೂ ಈ ವಿಷಯಗಳಲ್ಲಿ ಈಗಾಗಲೇ ಇರುವ ಅವುಗಳ ನಿಕಟ ಭಾಗಿದಾರಿಕೆಯನ್ನು ಬಲಪಡಿಸುವುದಕ್ಕೆ ರೈಸ್ ಹಾಗೂ ಜೈಶಂಕರ್ ಒಪ್ಪಿದ್ದಾರೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News