ಇಂಡೋನೇಶ್ಯದಲ್ಲಿ ಪೂರ್ಣ ಸೂರ್ಯಗ್ರಹಣ

Update: 2016-03-09 14:20 GMT

ಟೆರ್ನೇಟ್ (ಇಂಡೋನೇಶ್ಯ), ಮಾ. 9: ಇಂಡೋನೇಶ್ಯದಲ್ಲಿ ಬುಧವಾರ ಸಂಪೂರ್ಣ ಸೂರ್ಯಗ್ರಹಣ ಸಂಭವಿಸಿತು. ಈ ಖಗೋಳ ವಿದ್ಯಮಾನವನ್ನು ಸಾವಿರಾರು ಮಂದಿ ವೀಕ್ಷಿಸಿ ಆನಂದಿಸಿದರು.

ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಬೆಳಗ್ಗಿನ 6:19ಕ್ಕೆ ಹಾದುಹೋಗಲು ಆರಂಭಿಸಿತು. ಅದರ ಬಳಿಕ ಸುಮಾರು ಒಂದು ಗಂಟೆಯ ಬಳಿಕ ದೇಶದ ಪಶ್ಚಿಮದ ಭಾಗಗಳಿಗೆ ಸೂರ್ಯನ ನೇರ ಕಿರಣಗಳು ತಲುಪಲಿಲ್ಲ.

ಆಂಶಿಕ ಗ್ರಹಣಗಳು ಏಶ್ಯ ಮತ್ತು ಆಸ್ಟ್ರೇಲಿಯದ ವಿವಿಧ ಭಾಗಗಳಲ್ಲಿ ಗೋಚರಿಸಿದವು. ಸಂಪೂರ್ಣ ಸೂರ್ಯಗ್ರಹಣವನ್ನು ವೀಕ್ಷಿಸಲು ಸುಮಾರು 10,000 ವಿದೇಶೀಯರು ಇಂಡೋನೇಶ್ಯದಲ್ಲಿದ್ದರು.

ಸ್ಥಳೀಯ ಟಿವಿ ಚಾನೆಲ್‌ಗಳು ಸೂರ್ಯಗ್ರಹಣವನ್ನು ನೇರ ಪ್ರಸಾರದಲ್ಲಿ ತೋರಿಸಿದವು. ಸೂರ್ಯಗ್ರಹಣದ ಸಂದರ್ಭದಲ್ಲಿ ಸಂಪ್ರದಾಯವಾದಿ ಮುಸ್ಲಿಮರು ವಿಶೇಷ ಪ್ರಾರ್ಥನೆಗಳನ್ನು ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News