ಬೆಂಗಳೂರಿನ ವಿದ್ಯಾರ್ಥಿಯಿಂದ ನ್ಯೂಯಾರ್ಕ್‌ನಲ್ಲಿ ಅಂಗ ದಾನ
Update: 2016-03-09 20:39 IST
ನ್ಯೂಯಾರ್ಕ್, ಮಾ. 9: ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಯೊಬ್ಬರ ಕಣ್ಣುಗಳು, ಹೃದಯ, ಪ್ಯಾನ್‌ಕ್ರಿಯಾಸ್, ಮೂತ್ರಪಿಂಡಗಳು, ಓಸೋಫಾಗಸ್, ಲಿವರ್ ಮತ್ತು ಅಸ್ಥಿಮಜ್ಜೆಗಳು ನ್ಯೂಯಾರ್ಕ್‌ನಲ್ಲಿ ಎಂಟು ಮಂದಿಗೆ ಹೊಸ ಬದುಕನ್ನು ನೀಡಿವೆ.
24 ವರ್ಷದ ರಾಜೀವ್ ನಾಯ್ಡುರನ್ನು ಫೆಬ್ರವರಿ 21ರಂದು ಶ್ವಾಸಕೋಶದ ಸೋಂಕಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಅವರ ಎಲ್ಲ ಅಂಗಗಳನ್ನು ದಾನ ಮಾಡುವ ನಿರ್ಧಾರವನ್ನು ಬೆಂಗಳೂರಿನ ಬೊಮ್ಮಸಂದ್ರದಲ್ಲಿರುವ ಅವರ ಕುಟುಂಬ ತೆಗೆದುಕೊಂಡಿತು.
ರಾಜೀವ್ ವಾಶಿಂಗ್ಟನ್ ಸ್ಕ್ವೇರ್ ಸೌತ್‌ನಲ್ಲಿರುವ ನ್ಯೂಯಾರ್ಕ್ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಇಂಜಿನಿಯರಿಂಗ್ ಅಧ್ಯಯನ ನಡೆಸುತ್ತಿದ್ದರು.