ವಿಶ್ವ ಮಹಿಳಾ ದಿನದಂದು ಪತಿಯ ವೃಷಣವನ್ನೇ ಕಿತ್ತ ಮಹಿಳೆ!
ರೊಮೇನಿಯ, ಮಾರ್ಚ್.10: ಕೆಲವು ಪತಿಯಂದಿರು ಸಮಯ ಸಿಕ್ಕಾಗ ಮನೆಕೆಲಸದಲ್ಲಿ ಪತ್ನಿಗೆ ನೆರವಾಗುತ್ತಾರೆ. ಹೀಗೆ ಸಹಾಯ ಮಾಡದ ಗಂಡಂದಿರಿಗೆ ಪತ್ನಿಯರು ಕಿರಿಕಿರಿ ಮಾಡುವುದೂ ಇದೆ. ಆದರೆ ಮನೆಕೆಲಸಕ್ಕೆ ನೆರವಾಗಿಲ್ಲ ಎಂದು ರೊಮೇನಿಯದ ಈ ಪತ್ನಿ ಈವರೆಗೆ ಯಾರೂ ಕೇಳಿರದಂತಹ ಅಪರಾವತಾರ ತಾಳಿದ್ದಾಳೆ. ಮಹಿಳಾ ದಿನಾಚರಣೆಯಂದೇ ತನಗೆ ಮನೆ ಕೆಲಸಕ್ಕೆ ನೆರವಾಗಿಲ್ಲ ಎಂದು ಮತ್ತು ಹೂಗಳನ್ನು ನೀಡಿಲ್ಲ ಎಂದೂ ಪ್ರತಿಭಟಿಸಿ ಮರೀನದ ಬಿನಿಯಾ ಎಂಬ ನಲ್ವತ್ತು ವರ್ಷದ ಮಹಿಳೆ ತನ್ನ ಪತಿಯ ಲೈಂಗಿಕ ಅವಯವವನ್ನೇ ಕಿತ್ತು ಹಾಕಿದ್ದಾಳೆ! ಪತಿ ಲೋನೆಲ್ ನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಮನೆಕೆಲಸಕ್ಕೆ ನೆರವಾಗಬೇಕೆಂಬ ವಾಗ್ವಾದದಲ್ಲಿ ಬಿನಿಯಾ ತನ್ನ ಪತಿಯ ಲೈಂಗಿಕ ಅವಯವವನ್ನು ಕಿತ್ತು ದೂಡಿಹಾಕಿದ್ದಾಳೆಂದು ವರದಿಯಾಗಿದೆ. ಲೋನೆಲ್‌ನ ಎಡ ವೃಷಣ ಕಿತ್ತು ಬಂದಿದೆ. ಆಸ್ಪತ್ರೆಯಲ್ಲಿ ಆತನಿಗೆ ತುರ್ತು ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಆತ ಅಪಾಯದಿಂದ ಪಾರಾಗಿದ್ದಾನೆಂದು ವರದಿಯಾಗಿದೆ. ತನ್ನಲ್ಲಿ ಅಷ್ಟು ಶಕ್ತಿ ಇದೆ ಎಂದು ನಾನು ಭಾವಿಸಿಯೇ ಇರಲಿಲ್ಲ ಎಂದು ಘಟನೆಯ ನಂತರ ಬಿನಿಯಾ ಹೇಳಿದ್ದಾಳೆ. ಒಂದು ದಿವಸದ ಕೆಲಸಕ್ಕೆ ಲೋನೆಲ್‌ನಿಗೆ ಒಂದು ಬಾಟಲ್ ವೈನ್ ಸಿಕ್ಕಿತ್ತು. ಅದನ್ನು ಕುಡಿದು ಆತ ಮನೆಗೆ ಬಂದಿದ್ದ ಎಂದು ಬಿನಿಯಾ ಹೇಳಿದ್ದಾಳೆ. ಸ್ವಲ್ಪ ಮದ್ಯ ಕುಡಿದರೆ ಲೋನೆಲ್ ಬದಲಾಗುತ್ತಾನೆ. ತಾನು ಕೆಲಸಕ್ಕೆ ಹೋಗಲು ಹೇಳಿದರೂ ಅತ ಹೋಗಿಲ್ಲ. ಮನೆಕೆಲಸದಲ್ಲಿ ನೆರವಾಗಲು ಹೇಳಿದಾಗಲೂ ಆತ ಅಂದಾಡಲಿಲ್ಲ. ಸ್ವಲ್ಪ ಮಂಜುಗಡ್ಡೆ ಇಟ್ಟರೆ ಲೋನೆಲ್‌ನ ಲೈಂಗಿಕ ಅವಯವಕ್ಕಾದ ಗಾಯ ಗುಣವಾಗುತ್ತಿತ್ತು. ಅದರ ಬದಲಾಗಿ ಆತ ಆ್ಯಂಬುಲೆನ್ಸ್ ಕರೆಸಿಕೊಂಡಿದ್ದಾನೆ ಎಂದು ಬಿನಿಯಾ ದೂರಿದ್ದಾಳೆ. ಹದಿನೈದು ವರ್ಷಗಳಿಂದ ಒಟ್ಟಾಗಿ ಜೀವಿಸುವ ದಂಪತಿಗಳಿಗೆ ಹದಿನೈದು ವರ್ಷದ ಒಬ್ಬ ಪುತ್ರನಿದ್ದಾನೆ. ಲೋನೆಲ್‌ನ ವೃಷಣ ಚೀಲಕ್ಕೆ ಮಾರಕ ಗಾಯವಾಗಿತ್ತೆಂದು ಪ್ಯಾರಾ ಮೆಡಿಕಲ್ ವೈದ್ಯರು ಹೇಳಿದ್ದಾರೆ. ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.