×
Ad

ಬಿಹಾರದಲ್ಲಿ ಇನ್ನು ನಕಲಿ ಮದ್ಯ ತಯಾರಿಸಿದರೆ ಗಲ್ಲು ಶಿಕ್ಷೆ!

Update: 2016-03-10 16:14 IST

ಬಿಹಾರ, ಮಾರ್ಚ್.10: ಎಪ್ರಿಲ್ ತಿಂಗಳಿನಿಂದ ಜಾರಿಗೆ ಬರಲಿರುವ ಪಾನನಿರೋಧ ನಂತರವೂ ನಕಲಿ ಮದ್ಯ ತಯಾರಿಸಿದರೆ ಅಂತಹವರಿಗೆ ಬಿಹಾರ ಸರಕಾರ ಗಲ್ಲು ಶಿಕ್ಷೆ ನೀಡುವ ಕಾನೂನು ಸಿದ್ಧಪಡಿಸಲಾಗುವುದು ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾರೆ. ಮದ್ಯಮಾರಾಟ ಮಾಡಿ ಬದುಕುವ ದಾರಿ ಹಿಡಿದವರಿಗೆ ಅನಾನುಕೂಲ ಆಗದಿರಲಿ ಎಂದು ಸುಧಾ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡವುದಕ್ಕೆ ಅನುಮತಿಸಲು ಸರಕಾರ ನಿರ್ಧರಿಸಿದೆ. ಬಜೆಟ್ ಸತ್ರದಲ್ಲಿ ಕಾನೂನು ನಿರ್ಮಾಣಕ್ಕೆ ಸರಕಾರ ಯೋಜಿಸಿದೆ. ಸುಧಾ ಡೈರಿ ಉತ್ಪನ್ನಗಳನ್ನು ಮಾರುವುದಕ್ಕೆ ಅನುಮತಿ ಕೇಳಿ ಸುಮಾರು 200ಕ್ಕೂ ಅಧಿಕ ಅರ್ಜಿಗಳು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮನೆಮನೆಯಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಸಲಿಕ್ಕೂ ಸರಕಾರ ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News