×
Ad

ಫೇಸ್‌ಬುಕ್‌ನಲ್ಲಿ ಪತ್ನಿಯನ್ನು ಮಾರಾಟಕಿಟ್ಟ ಅಧ್ಯಾಪಕ ಮತ್ತು ವಿದ್ಯಾರ್ಥಿಯ ಬಂಧನ

Update: 2016-03-11 12:03 IST

ಇಂದೋರ್, ಮಾರ್ಚ್.11: ಫೇಸ್‌ಬುಕ್‌ನಲ್ಲಿ ಪತ್ನಿಯನ್ನು ಮಾರಟಕ್ಕಿಟ್ಟ ಆರೋಪಿ ಕಾಲೇಜು ಅಧ್ಯಾಪಕನನ್ನು ವಿದ್ಯಾರ್ಥಿಯೊಬ್ಬನ ಜೊತೆ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಗುರುವಾರ ಶಿಕ್ಷಕ ಸಾಲ ತೀರಿಸಲು ತನ್ನ ವಿದ್ಯಾರ್ಥಿಯ ಜೊತೆ ಸೇರಿ ಈ ಕೃತ್ಯವೆಸಗಿದ್ದಾನೆಂದು ತಿಳಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಲಿಕ್ಕಾಗಿ ಅಧ್ಯಾಪಕ ತನ್ನ ವಿದ್ಯಾರ್ಥಿಗೆತನ್ನ ಫೇಸ್‌ಬುಕ್‌ನ ಪಾಸ್‌ವರ್ಡ್‌ನ್ನು ನೀಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ವಿಮಾನ ನಿಲ್ದಾಣ ಪೊಲೀಸ್ ಠಾಣೆಯ ಪ್ರಭಾರಿ ಇನ್ಸ್‌ಪೆಕ್ಟರ್ ಬಲಜಿತ್ ಸಿಂಗ್ ಹೇಳಿರುವ ಪ್ರಕಾರ ದಿಲೀಪ್ ಮಾಲಿ(30) ಮತ್ತು ಅವರ ವಿದ್ಯಾರ್ಥಿ ಕಮಲೇಶ್ ಮೆಹ್ತಾನನ್ನು ಬುಧವಾರ ರಾತ್ರಿ ಬಂಧಿಸಲಾಗಿದೆ. ದಿಲೀಪ್ ಮಾಲಿ ಮಾರ್ಚ್ ಆರರಂದು ಫೇಸ್‌ಬುಕ್‌ನಲ್ಲಿ ಹಿಂದಿ ಭಾಷೆಯಲ್ಲಿ ತನ್ನ ಪತ್ನಿಯನ್ನು ಮಾರುತ್ತೇನೆಂದು ಹೇಳಿಕೊಂಡಿದ್ದರು. ಜೊತೆಗೆ ತನ್ನ ಪತ್ನಿ ಮತ್ತು ಎರಡು ವರ್ಷದ ಮಗಳ ಚಿತ್ರವನ್ನೂ ಪೋಸ್ಟ್ ಮಾಡಿದ್ದರಲ್ಲದೆ ತನ್ನ ಮೊಬೈಲ್ ನಂಬರನ್ನು ನೀಡಿದ್ದರು.

 ಈ ವಿಷಯವನ್ನು ಅವರ ಪತ್ನಿಗೆ ಸಂಬಂಧಿಕರು ತಿಳಿಸಿದಾಗ ಆಕೆ ಪೊಲೀಸರಿಗೆ ದೂರಿತ್ತಿದ್ದರು. ಪೊಲೀಸ್ ತನಿಖೆಯಲ್ಲಿ ಈ ಪೋಸ್ಟ್ ಹಾಕಲಿಕ್ಕೆ ಕಮಲೇಶನಿಗೆ ದಿಲೀಪ್ ಹೇಳಿದ್ದನೆಂದು ತಿಳಿದು ಬಂದಿದೆ. ಕಮಲೇಶ್ ದಿಲೀಪ್‌ರಿಗೆ ಸಾಲ ನೀಡಿದ್ದ ಅದನ್ನು ಕೊಡದ್ದರಿಂದ ಕಮಲೇಶ್ ದಿಲೀಪ್ ಮಾಲಿಯ ಮೊಬೈಲ್‌ನ್ನು ತೆಗೆದುಕೊಂಡಿದ್ದನು. ಸಾಲದ ಹಣ ಕೊಟ್ಟಾಗ ಮೊಬೈಲ್ ವಾಪಸು ಕೊಡುವೆ ಎಂದು ಹೇಳಿದ್ದ. ಆದರೆ ಅಧ್ಯಾಪಕ ದಿಲೀಪ್ ಮಾಲಿ ತನ್ನ ಪಾಸ್‌ವರ್ಡ್ ಕೊಟ್ಟುಹೆಂಡತಿಯನ್ನು ಮಾರುವ ಪೋಸ್ಟ್ ಹಾಕಲು ಹೇಳಿದ್ದನೆಂದು ತನಿಖೆಯಲ್ಲಿ ಪತ್ತೆಯಾಗಿದೆ. ವಿದ್ಯಾರ್ಥಿಯ ಬಂಧನದಿಂದ ಈ ಎಲ್ಲ ವಿಚಾರಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News