×
Ad

ಬೆಂಕಿಯಿಂದ ತಪ್ಪಿಸಲು ಮಕ್ಕಳನ್ನು ಕಿಟಿಕಿಯಿಂದ ಕೆಳಗೆ ಹಾಕಿದ ಮಹಿಳೆ

Update: 2016-03-11 19:35 IST

ಸಿಡ್ನಿ, ಮಾ. 11: ಸಿಡ್ನಿಯ ತನ್ನ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಾಗ ಈ ಮಹಿಳೆ ಮೊದಲು ಮಾಡಿದ ಕೆಲಸವೆಂದರೆ, ತನ್ನ ಎರಡು ದಿನದ ಮಗು ಮತ್ತು 2 ವರ್ಷದ ಇನ್ನೊಂದು ಮಗುವನ್ನು ಎರಡನೆ ಮಹಡಿಯ ಕಿಟಿಕಿಯಿಂದ ಕೆಳಗೆ ಬಿಸಾಡಿದ್ದು. ಕೆಳಗೆ ಸಿದ್ಧರಾಗಿ ನಿಂತಿದ್ದ ಜನರು ಮಕ್ಕಳನ್ನು ಸುರಕ್ಷಿತವಾಗಿ ಪಾರು ಮಾಡಿದರು.

ಗುರುವಾರ ರಾತ್ರಿ ಉಪನಗರ ಲ್ಯಾಕೆಂಬದಲ್ಲಿ ನಡೆದ ಘಟನೆಯಲ್ಲಿ ಮಕ್ಕಳಿಗೆ ಬೆಂಕಿಯಿಂದಾಗಲಿ, 6 ಮೀಟರ್ ಎತ್ತರದಿಂದ ಕೆಳಗೆ ಬಿದ್ದಿದ್ದರಿಂದಾಗಲಿ ಯಾವುದೇ ಗಾಯಗಳಾಗಿಲ್ಲ.

ಬಳಿಕ ಅಗ್ನಿಶಾಮಕ ಸಿಬ್ಬಂದಿ ಏಣಿಯನ್ನು ಬಳಸಿ 27 ವರ್ಷದ ಮಹಿಳೆಯನ್ನು ರಕ್ಷಿಸಿದರು. ಮಕ್ಕಳನ್ನು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವ ಮೊದಲೇ ರಕ್ಷಿಸಲಾಗಿತ್ತು. 2 ದಿನದ ಮಗುವನ್ನು ಹಾಸಿಗೆಯ ಮೇಲೆ ಹೊದಿಕೆ ಹಿಡಿದುಕೊಂಡಿದ್ದ ಜನರು ರಕ್ಷಿಸಿದರು.

ಅಡುಗೆ ಮನೆಯಲ್ಲಿ ಕಾಣಿಸಿಕೊಂಡ ಬೆಂಕಿ ಇತರ ಅಪಾರ್ಟ್‌ಮೆಂಟ್‌ಗಳಿಗೂ ಹರಡಿತು ಹಾಗೂ 12 ಅಪಾರ್ಟ್‌ಮೆಂಟ್‌ಗಳ ಕಟ್ಟಡದಿಂದ ಸುಮಾರು 50 ಮಂದಿಯನ್ನು ಹೊರಗೆ ಕರೆದೊಯ್ಯಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News