ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ 270 ಹುದ್ದೆಗಳಿಗೆ ಪರೀಕ್ಷೆ : ಅಧಿಸೂಚನೆ ಪ್ರಕಟ
ಹೊಸದಿಲ್ಲಿ , ಮಾ. 11 : ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ (ಅಸಿಸ್ಟಂಟ್ ಕಮಾಂಡೆಂಟ್ಸ್ ) CAPF (AC) ಪರೀಕ್ಷೆಯ ಅಧಿಕೃತ ಅಧಿಸೂಚನೆಯನ್ನು ಕೇಂದ್ರ ನಾಗರೀಕ ಸೇವಾ ಆಯೋಗ (UPSC) ಬಿಡುಗಡೆ ಮಾಡಿದೆ.
ಗಡಿ ಭದ್ರತಾ ಪಡೆ (BSF), ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF), ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF), ಇಂಡೋ ಟಿಬೆಟನ್ ಗಡಿ ಪೊಲೀಸ್ (ITBP) ಹಾಗು ಸಶಸ್ತ್ರ ಸೀಮಾ ಬಲ್ (SSB)ಗಳನ್ನು ಒಳಗೊಂಡ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ () ಲ್ಲಿ ಅಸಿಸ್ಟಂಟ್ ಕಮಾಂಡೆಂಟ್ಸ್ (ಗ್ರೂಪ್ ಎ) ಗಳ ನೇಮಕಕ್ಕೆ ಲಿಖಿತ ಪರೀಕ್ಷೆ ಜೂನ್ 26,2016 ರಂದು ನಡೆಯಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಪ್ರಿಲ್ 8 .
ಈ ಪರೀಕ್ಷೆಯ ಫಲಿತಾಂಶದ ಆಧಾರದಲ್ಲಿ ಭರ್ತಿಯಾಗುವ ಅಂದಾಜು ಹುದ್ದೆಗಳ ಸಂಖ್ಯೆ ಈ ಕೆಳಗಿನಂತಿದೆ :
BSF 28
CRPF 97
ITBP 87
SSB 58
Total 270
ಪರೀಕ್ಷೆಯ ಮಾದರಿ ಹಾಗು ಇತರ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ.
http://www.upsc.gov.in/exams/notifications/2016/CAPF_ACs/Notice_CAPF_ACs_Exam_ 2016_Engl.pdf