ಆಧಾರ್ ಮಸೂದೆ ಅಂಗೀಕಾರ
Update: 2016-03-11 23:47 IST
ಹೊಸದಿಲ್ಲಿ, ಮಾ.11: ಭಾರತದ ನಿವಾಸಿಗಳಿಗೆ ವಿಶಿಷ್ಟ ಗುರುತನ್ನು ಒದಗಿಸುವ ಹಾಗೂ ಸರಕಾರದ ಸಬ್ಸಿಡಿಗಳು ಹಾಗೂ ಸೇವೆಗಳು ಫಲಾನುಭವಿಗಳಿಗೆ ನೇರವಾಗಿ ತಲುಪುವುದನ್ನು ಖಚಿತಪಡಿಸುವಲ್ಲಿ ಅದಕ್ಕೆ ಕಾನೂನು ಬೆಂಬಲ ನೀಡುವ ಆಧಾರ್ ಮಸೂದೆಯು ಶುಕ್ರವಾರ ಲೋಕಸಭೆಯಲ್ಲಿ ಮಂಜೂರಾಗಿದೆ.
ಅಲ್ಪಾವಧಿ ಚರ್ಚೆಯ ಬಳಿಕ ಆಧಾರ್(ಆರ್ಥಿಕ ಹಾಗೂ ಇತರ ಸಬ್ಸಿಡಿಗಳು, ಲಾಭಗಳು ಹಾಗೂ ಸೇವೆಗಳ ಪೂರೈಕೆ ಗುರಿ) ಮಸೂದೆ-2016 ಧ್ವನಿ ಮತದಿಂದ ಅಂಗೀಕಾರವಾಯಿತು. ಆಧಾರ್‌ಗಾಗಿ ಒದಗಿಸಲಾಗಿರುವ ವ್ಯಕ್ತಿಗಳ ವಿವರ ಯಾವುದೇ ರೀತಿ ದುರುಪಯೋಗವಾಗದೆಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಸದನಕ್ಕೆ ಭರವಸೆ ನೀಡಿದರು.