ಲಂಕಾ: ಉಪವಾಸ ಮುಷ್ಕರ ನಿಲ್ಲಿಸಿದ ತಮಿಳು ಕೈದಿಗಳು

Update: 2016-03-12 15:12 GMT

ಕೊಲಂಬೊ, ಮಾ. 12: ಸುದೀರ್ಘ ಕಾಲ ತಮ್ಮನ್ನು ವಿಚಾರಣೆಯಿಲ್ಲದೆ ಜೈಲಿನಲ್ಲಿಡುತ್ತಿರುವುದನ್ನು ಪ್ರತಿಭಟಿಸಿ ನಡೆಸುತ್ತಿರುವ ಉಪವಾಸ ಮುಷ್ಕರವನ್ನು ಶ್ರೀಲಂಕಾದ ತಮಿಳು ರಾಜಕೀಯ ಕೈದಿಗಳು ನಿಲ್ಲಿಸಿದ್ದಾರೆ. ಅಧಿಕಾರಿಗಳು ಶೀಘ್ರ ವಿಚಾರಣೆಯ ಭರವಸೆಯನ್ನು ನೀಡಿದ ಹಿನ್ನೆಲೆಯಲ್ಲಿ ಅವರು ಈ ಕ್ರಮ ತೆಗೆದುಕೊಂಡಿದ್ದಾರೆ.
ತಮ್ಮ ವಿರುದ್ಧದ ಪ್ರಕರಣಗಳ ವಿಚಾರಣೆಯನ್ನು ತ್ವರಿತಗೊಳಿಸಬೇಕು ಅಥವಾ ತಮ್ಮನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿ 13 ಮಾಜಿ ಎಲ್ಟಿಟಿಇ ಕಾರ್ಯಕರ್ತರು ಫೆಬ್ರವರಿ 23ರಂದು ಉಪವಾಸ ಮುಷ್ಕರ ಆರಂಭಿಸಿದ್ದರು.
ಜೈಲು ಸುಧಾರಣೆ ಮತ್ತು ಪುನರ್ವಸತಿ ಸಚಿವ ಡಿ.ಎಂ. ಸ್ವಾಮಿನಾಥನ್ ಕ್ಷಿಪ್ರ ವಿಚಾರಣೆಯ ಭರವಸೆ ನೀಡಿದ ಬಳಿಕ ಕೈದಿಗಳು ಉಮ್ಮ ಉಪವಾಸವನ್ನು ನಿಲ್ಲಿಸಿದರು.
ಈ ವಿಷಯದ ಬಗ್ಗೆ ಅಟಾರ್ನಿ ಜನರಲ್ ವಿಭಾಗದ ಅಧಿಕಾರಿಗಳೊಂದಿಗೆ ತಾನು ಮಾತುಕತೆ ನಡೆಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂಬುದಾಗಿ ಜೈಲು ಕಮಿಶನರ್ ಜನರಲ್ ನಿಸಾನ್ ದನಸಿಂೆ ಕೈದಿಗಳಿಗೆ ತಿಳಿಸಿದರು.
ಉಪವಾಸ ಮುಷ್ಕರದಿಂದಾಗಿ ಅಸ್ವಸ್ಥಗೊಂಡಿರುವ ನಾಲ್ವರು ಕೈದಿಗಳನ್ನು ಜೈಲಿನ ಆಸ್ಪತ್ರೆಗೆ ಸೇರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News