ಮುಸ್ಲಿಮ್ ಎಂದು ಭಾವಿಸಿ ಬೌದ್ಧ ಬಿಕ್ಕುಗೆ ಹಲ್ಲೆ
Update: 2016-03-12 23:33 IST
ಸ್ಯಾನ್‌ಫ್ರಾನ್ಸಿಸ್ಕೊ, ಮಾ. 12: 66 ವರ್ಷದ ಬೌದ್ಧ ಬಿಕ್ಕುವೊಬ್ಬರ ಮೇಲೆ ಅಮೆರಿಕದಲ್ಲಿ ಹಲ್ಲೆ ನಡೆಸಲಾಗಿದೆ. ಅವರನ್ನು ಮುಸ್ಲಿಮ್ ಎಂಬುದಾಗಿ ಭಾವಿಸಿ ದುಷ್ಕರ್ಮಿ ಹಲ್ಲೆ ನಡೆಸಿರಬೇಕು ಎಂದು ಭಾವಿಸಲಾಗಿದೆ.
ಒರೆಗಾನ್ ರಾಜ್ಯದ ಹುಡ್ ನದಿಗೆ ಹೋಗಿದ್ದಾಗ ತನ್ನ ಮೇಲೆ ಹಲ್ಲೆ ನಡೆಯಿತು ಎಂದು ಬೌದ್ಧ ಬಿಕ್ಕು ಕೋಝನ್ ಸ್ಯಾಂಪ್ಸನ್ ಹೇಳಿದ್ದಾರೆ.
ವ್ಯಕ್ತಿಯೋರ್ವ ಸ್ಯಾಂಪ್ಸನ್‌ರ ತಲೆಯನ್ನು ಅವರ ಕಾರಿನ ಬಾಗಿಲಿಗೆ ಬಡಿದನು, ನಿಂದಿಸಿದನು ಹಾಗೂ ಬಳಿಕ ಓಡಿ ಹೋದನು ಎಂದು ಹುಡ್ ರಿವರ್ ಪೊಲೀಸ್ ಇಲಾಖೆ ತಿಳಿಸಿದೆ. ಕಂದು ಕೂದಲಿನ ಬಿಳಿ ವ್ಯಕ್ತಿ ಫೆಬ್ರವರಿ 29ರಂದು ನಡೆಸಿದ ಈ ಹಲ್ಲೆ ದ್ವೇಷ ಪ್ರೇರಿತವಾಗಿದೆ ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದಾರೆ.