×
Ad

ದೇಶದ್ರೋಹಿ ಹಣೆಪಟ್ಟಿ ಹಚ್ಚಿದ ಝೀ ನ್ಯೂಸ್ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಕವಿ ಗೌಹರ್ ರಝಾ

Update: 2016-03-12 23:56 IST

ಹೊಸದಿಲ್ಲಿ, ಮಾ.12: ಜೆಎನ್‌ಯುವಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗ ಲಾಗಿದೆ ಯೆಂದು ಝೀ ನ್ಯೂಸ್ ವಾಹಿನಿ ತೋರಿಸಿದ ನಕಲಿ ವೀಡಿಯೊ ಸಂಬಂಧ ಚಾನೆಲ್ ಸಾಕಷ್ಟು ಟೀಕೆಗಳನ್ನು ಎದುರಿಸಿದ ಹೊರತಾಗಿಯೂ ಅದು ಈಗ ಖ್ಯಾತ ವಿಜ್ಞಾನಿ, ಕವಿ ಹಾಗೂ ಚಿತ್ರ ನಿರ್ಮಾಪಕ ಗೌಹರ್ ರಝಾರನ್ನು ‘ದೇಶ-ವಿರೋಧಿ’ ಎಂದು ಟೀಕಿಸಿದೆ. ಇದ ನ್ನೊಂದು ಅಪಾಯಕಾರಿ ಬೆಳವಣಿಗೆ ಯೆಂದು ಬಣ್ಣಿಸಿರುವ ರಾಝಾ ತಾನು ಝೀ ನ್ಯೂಸ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಯೋಚಿಸುತ್ತಿರುವುದಾಗಿ ಹೇಳಿದರು.

     ಕೌನ್ಸಿಲ್ ಆಫ್ ಸೈಂಟಿಫಿಕ್ ಎಂಡ್ ಇಂಡಸ್ಟ್ರಿಯಲ್ ರಿಸರ್ಚ್‌ನಲ್ಲಿ ಹಿರಿಯ ವಿಜ್ಞಾನಿಯಾಗಿರುವ ಗೌಹರ್ ಇತ್ತೀಚೆಗೆ ದಿಲ್ಲಿಯಲ್ಲಿ ನಡೆದ ಕಾವ್ಯ ವಿಚಾರ ಸಂಕಿರಣ ವೊಂದರಲ್ಲಿ ಅಸಹಿಷ್ಣುತೆ, ವಾಕ್‌ಸ್ವಾತಂತ್ರ್ಯ ಹಾಗೂ ದೇಶದ್ರೋಹದ ವಿಚಾರವಾಗಿ ಉರ್ದು ಕವಿತೆಯೊಂದನ್ನು ವಾಚಿಸಿದ್ದರೆ ಗುರುವಾರ ಝೀ ನ್ಯೂಸ್‌ನ ಆ್ಯಂಕರ್ ಸುಧೀರ್ ಚೌಧುರಿ ಪ್ರಸ್ತುತ ಪಡಿಸಿದ ಕಾರ್ಯಕ್ರಮವೊಂದರಲ್ಲಿ ರಝಾರನ್ನು ‘ಅಫ್ಝಲ್ ಪ್ರೇಮಿಗಳ ಗ್ಯಾಂಗ್’ ಸದಸ್ಯರೆಂದು ವರ್ಣಿಸ ಲಾಯಿತು. ‘‘ಕಾಶ್ಮೀರ ಅಥವಾ ದೆಹಲಿಯಾಗಿರಬಹುದು, ಪಾಕಿಸ್ತಾನ ಪ್ರೇಮಿ ಗ್ಯಾಂಗ್ ಸಕ್ರಿಯವಾಗಿದೆಯೆಂಬುದನ್ನು ನಾವು ಹೇಳುತ್ತಲೇ ಇದ್ದೇವೆ. ಈ ಗ್ಯಾಂಗ್ ಮಾಧ್ಯಮದಲ್ಲಿ, ಸಾಮಾಜಿಕ ತಾಣದಲ್ಲಿ ಹಾಗೂ ಇತರ ವೇದಿಕೆಗಳಲ್ಲಿ ಕೆಲವೊಂದು ದೇಶದ್ರೋಹಿ ಶಕ್ತಿಗಳನ್ನು ರಕ್ಷಿಸುವ ಸಲುವಾಗಿ ಸಕ್ರಿಯವಾಗಿವೆ,’’ ಎಂದು ಚೌಧರಿ ಟಿವಿ ಕಾರ್ಯಕ್ರಮದಲ್ಲಿ ಹೇಳಿದರು.
 ರಝಾರವರ ಕವಿತಾ ವಾಚನದ ವೀಡಿಯೊ ಕೂಡ ಚಾನೆಲ್ ಪ್ರಸಾರ ಮಾಡಿದ್ದು ಹಿನ್ನೆಲೆಯಲ್ಲಿ ‘ಕವಿತಾ ವಾಚನ ಸರಿ, ಆದರೆ ದೇಶ ವಿರೋಧಿ ಘೋಷಣೆಗಳನ್ನು ಕೂಗಿದವರನ್ನು ಹೊಗಳಿ ಪದ್ಯಗಳನ್ನು ಹಾಡ ಬೇಕೇ?’’ ಎಂದು ಹೇಳುವ ಧ್ವನಿ ಕೇಳಿ ಬಂತು. ದೇಶದ್ರೋಹ ಪ್ರಕರಣವೆದುರಿಸುತ್ತಿರುವ ಕನ್ಹಯ್ಯಿ ಕುಮಾರ್ ಚಿತ್ರ ವನ್ನೂ ಪರದೆಯ ಮೇಲೆ ತೋರಿಸಲಾಯಿತು.
  ತರುವಾಯ ಸುಮಾರು 200 ಮಂದಿ ಶಿಕ್ಷಣತಜ್ಞರು, ಚಿತ್ರ ನಿರ್ಮಾತೃಗಳು, ರಂಗಭೂಮಿ ಕಲಾವಿದರು ಹಾಗೂ ಸಾಮಾಜಿಕ ಕಾರ್ಯಕರ್ತರು ಜೆಎನ್‌ಯು ಪ್ರೊಫೆಸರ್ ನಿವೇದಿತಾ ಮೆನನ್ ಹಾಗೂ ಈಗ ಗೌಹರ್ ರಝಾರವರನ್ನು ಆಕ್ಷೇಪಾರ್ಹ ರೀತಿಯಲ್ಲಿ ಬಿಂಬಿಸಿರುವ ಝೀ ನ್ಯೂಸ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಂಟಿ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News