×
Ad

ಅಪ್ರಾಪ್ತ ಬಾಲಕರನ್ನು ನಗ್ನಗೊಳಿಸಿ ಶಿಕ್ಷೆ ನೀಡಿದ ಕೋಚಿಂಗ್ ಸೆಂಟರ್

Update: 2016-03-13 15:32 IST

ಮುಂಬೈ, ಮಾರ್ಚ್. 13: ಕೋಚಿಂಗ್ ಸೆಂಟರೊಂದು ಅಪ್ರಾಪ್ತಬಾಲಕರಿಗೆ ಅಮಾನವೀಯ ಶಿಕ್ಷೆಯನ್ನು ನೀಡಿದೆ. ಕೋಚಿಂಗ್ ಸೆಂಟರ್‌ನ ಹೊರಗೆ ಬಾಲಕನೊಬ್ಬನನ್ನು ನಗ್ನವಾಗಿ ನಿಲ್ಲಿಸಿದ್ದಲ್ಲದೆ ಇತರ ಬಾಲಕರನ್ನು ಕೇವಲ ಟಿಶರ್ಟ್ ಧರಿಸಿ ಅವನ ಜೊತೆ ನಿಲ್ಲುವ ಶಿಕ್ಷೆಯನ್ನು ನೀಡಲಾಗಿದೆ. ಈ ಕುರಿತು ಪೊಲೀಸರು ಕೋಚಿಂಗ್ ಸೆಂಟರ್‌ನ ಇಬ್ಬರು ವ್ಯಕ್ತಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದಾಗ ಅದು ವೈರಲ್ ಆಗಿತ್ತು. ಆನಂತರ ಹೀಗೊಂದು ಘಟನೆ ನಡೆದಿರುವ ಕುರಿತು ಬಹಿರಂಗವಾಗಿದೆ.


 ಇಬ್ಬರು ಮಕ್ಕಳನ್ನು ಉಪನಗರ ಮಲಾಡ್‌ನ ಶ್ರೀಜಿ ಕೋಚಿಂಗ್ ಸೆಂಟರ್‌ನ ಹೊರಗೆ ನಿಲ್ಲಿಸಲಾಗಿತ್ತು. ಇವರಲ್ಲಿ ಒಬ್ಬನ ಎಲ್ಲ ಬಟ್ಟೆಗಳನ್ನು ಕಳಚಲಾಗಿತ್ತು. ಇನ್ನೊಬ್ಬ ಟೀ ಶರ್ಟ್ ಮಾತ್ರ ಧರಿಸಿದ್ದ. ಈ ಘಟನೆ ಯಾವಾಗ ನಡೆದಿದೆ ಎಂದು ವೀಡಿಯೊದಲ್ಲಿ ಸ್ಪಷ್ಟವಾಗಿ ತಿಳಿಯುವುದಿಲ್ಲ. ಹಿರಿಯ ಪೊಲೀಸ್ ಅಧಿಕಾರಿ ಈ ಕುರಿತು ಪ್ರತಿಕ್ರಿಯಿಸಿದ್ದು ಘಟನೆ ಪೊಲೀಸರ ಗಮನಕ್ಕೆ ಬಂದ ನಂತರ ನಾವು ಕ್ರಮಕೈಗೊಳ್ಳಲು ನಿರ್ಧರಿಸಿದೆವು ಎಂದು ತಿಳಿಸಿದ್ದಾರೆ. ಕೋಚಿಂಗ್ ಸೆಂಟರ್‌ನ ಇಬ್ಬರು ವ್ಯಕ್ತಿಗಳ ವಿರುದ್ಧ ಬಾಲನ್ಯಾಯ ಕಾನೂನು ಪ್ರಕಾರ ಮೊಕದ್ದಮೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಆದರೆ ಈವರೆಗೂ ಯಾರನ್ನೂ ಬಂಧಿಸಲಾಗಿಲ್ಲ. ತನಿಖೆ ಮುಂದುವರಿಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News