3ನೆವಯಸ್ಸಿನಲ್ಲಿ ನಿರಾಶ್ರಿತರಾದ ಪ್ರಿಯಾ ಈಗ ಅಸಹಾಯಕರ ಕಣ್ಣೊರೆಸುತ್ತಿದ್ದಾರೆ

Update: 2016-03-13 10:47 GMT

  ವಾರಣಾಸಿ ಮಾರ್ಚ್. 13: ಉತ್ತರ ಪ್ರದೇಶದ ವಾರಣಾಸಿ ಜಿಲ್ಲೆಯಲ್ಲಿ ಪ್ರಿಯ ಎಂಬ ದಾದಿ ರೋಗಿಗಳಿಗೆ ಉಚಿತ ಉಪಚಾರ ಮಾಡುತ್ತಾರೆ. ರೋಗಿಗಳಲ್ಲಿ ಉತ್ತಮವಾಗಿ ಬದಕುವ ಭರವಸೆ ತುಂಬುತ್ತಾರೆ. ಪ್ರಿಯಾರಿಗೆ ಮೂರು ವರ್ಷವಾದಾಗ ಅವರ ತಂದೆ ರೈಲ್ವೆಸ್ಟೇಶನ್‌ನಲ್ಲಿ ಏನನ್ನೋ ಖರೀದಿಸಲು ಇಳಿದಿದ್ದರು. ಆನಂತರ ಅವರಿಗೆ ತಂದೆ ಈವರೆಗೂ ಸಿಕ್ಕಿಲ್ಲ. ಪ್ರಿಯಾ ತನ್ನ ಕಡಿಮೆ ಸಂಬಳದ ದುಡಿಮೆಯಲ್ಲಿಯೂ ಅಗತ್ಯವಿರುವವರಿಗೆ ನೆರವಾಗುತ್ತಾರೆ.

 ಮೂರು ವರ್ಷವಾಗಿದ್ದಾಗ ಪ್ರಿಯಾ ತನ್ನ ಕುಟುಂಬದವರಿಂದ ಪರಿತ್ಯಕ್ತರಾಗಿದ್ದರು. ಅವರು ತನ್ನ ತಂದೆಯ ಜೊತೆ ವಾರಣಾಸಿಯಿಂದ ದಿಲ್ಲಿಗೆ ಪ್ರಯಾಣಿಸುತ್ತಿದ್ದರು. ಯಾವುದೋ ರೈಲ್ವೇ ನಿಲ್ದಾಣದಲ್ಲಿ ಕೆಲವು ಸಾಮಗ್ರಿ ಖರೀದಿಸಲು ಅವರ ತಂದೆ ರೈಲಿನಿಂದ ಕೆಳಗೆ ಇಳಿದಿದ್ದರು. ಆನಂತರ ತಂದೆ ವಾಪಸು ಬಂದಿರಲಿಲ್ಲ. ಬಾಲಕಿಯಾಗಿದ್ದ ಅವರನ್ನು ಬಾಲ ಸಂರಕ್ಷಣಾ ಕೆಂದ್ರಕ್ಕೆ ನಂತರ ಸೇರಿಸಲಾಗಿತ್ತು.

 ಕೆಲವು ಸಮಯದ ಬಳಿಕ ಬಾಲಕಿಯರ ಸಂರಕ್ಷಣಾ ಗೃಹ ಸಂವಾಸಿನಿಗೆ ಪ್ರಿಯಾರನ್ನು ಭರ್ತಿ ಮಾಡಲಾಗಿತ್ತು.ಹದಿನೇಳು ವರ್ಷದವರೆಗೆ ಅಲ್ಲಿದ್ದರು. ಆವೇಳೆ ಅವರಿಗೆ ಯೋಗ ಶಿಕ್ಷಕಿ ಪುಷ್ಪಾಂಜಲಿಯ ಭೇಟಿಯಾಗಿತ್ತು. ಪುಷ್ಪಾಂಜಲಿ ಮೇಡಮ್‌ರ ತರಬೇತಿಯಿಂದ ಹೊಸ ಜೀವನ ನಡೆಸಲು ಸಾಧ್ಯವಾಯಿತು ಎಂದು ಪ್ರಿಯಾ ಹೇಳುತ್ತಾರೆ.

ಇಪ್ಪತ್ತು ವರ್ಷದ ಪ್ರಿಯಾ ಈಗ ಇಲ್ಲಿನ ಒಮೆಗಾ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ತನ್ನ ಮೊದಲ ಸಂಬಳವನ್ನು ಸಂವಾಸಿನಿ ಗೃಹದ ಮಕ್ಕಳಿಗೆ ಆವಶ್ಯಕ ವಸ್ತುಗಳನ್ನು ಖರೀದಿಸಿದ್ದಾರೆ. ಅದೇ ವೇಳೆ ಪುಷ್ಪಾಂಜಲಿ ಮೇಡಮ್ ಹೊಸರೀತಿ ಬದುಕುವ ಪ್ರಿಯಾರ ಉದ್ದೇಶವನ್ನು ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News