ಬಾಂಬ್ ಮತ್ತು ಚೆಂಡನ್ನು ಒಟ್ಟಿಗೇ ಎಸೆಯಲು ಸಾಧ್ಯವಿಲ್ಲ: ಉದ್ಧವ್ ಠಾಕ್ರೆ

Update: 2016-03-13 11:22 GMT

ಹೊಸದಿಲ್ಲಿ,ಮಾರ್ಚ್. 13: ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಟಿ-20 ವಿಶ್ವ ಕಪ್ ಕ್ರಿಕೆಟ್‌ನಲ್ಲಿ ಭಾತರ ಪಾಕಿಸ್ತಾನ ಪಂದ್ಯಗಳ ಕುರಿತು ಟೀಕಾ ಪ್ರಹಾರ ನಡೆಸುತ್ತಾ ಚೆಂಡು ಮತ್ತು ಬಾಂಬನ್ನು ಒಂದೇ ಬಾರಿಗೆ ಎಸೆಯಲಾಗುತ್ತಿದೆ ಎಂದಿದ್ದಾರೆ. ಗಡಿಯಲ್ಲಿರುವ ಸೇನಾ ಯೋಧರು ಹಿಂದೆ ತಿರುಗಿದಾಗ ಅವರ ಒಂದು ಕೈಯಲ್ಲಿ ಬಾಂಬು ಇನ್ನೊಂದು ಕೈಯಲ್ಲಿ ಚೆಂಡು ಇರುವುದು ಕಾಣಿಸುತ್ತಿದೆ. ನಾವು ಇಂತಹ ಅಪಾಯಕಾರಿ ಅಟವನ್ನು ಅಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಬೆನ್ನಿಗೆ ಚೂರಿಹಾಕುವ ದೇಶದೊಂದಿಗೆ ಆಟ ಆಡುವ ಅಗತ್ಯವಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ಟಿ-20 ಕ್ರಿಕೆಟ್ ಮ್ಯಾಚ್ ಆಡಲು ನಿನ್ನೆ ಪಾಕಿಸ್ತಾನ ತಂಡ ಭಾರತಕ್ಕೆ ಆಗಮಿಸಿದ್ದು ಭಾರೀ ಭದ್ರತೆಯನ್ನು ಒದಗಿಸಲಾಗಿದೆ. ಗುಪ್ತಚರ ಇಲಾಖೆ ಪಾಕ್ ತಂಡ ಭಾರತಕ್ಕೆ ಬರುತ್ತಿದ್ದಂತೆ ಭಯೋತ್ಪದಕ ಸಂಘಟನೆಗಳು ತಮ್ಮ ಚಟುವಟಿಕೆಗಳನ್ನು ತೀವ್ರಗೊಳಿಸಲಿದೆ ಎಂದು ಎಚ್ಚರಿಸಿತ್ತು. ಪಾಕ್ ತಂಡದ ಭದ್ರತೆಯ ಕುರಿತು ಪ.ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬರವಣೆಗೆಯಲ್ಲಿ ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News