×
Ad

‘ಕೆಲಾಗ್ಸ್’ ಆಹಾರ ಉತ್ಪನ್ನಗಳ ಮೇಲೆ ಮೂತ್ರ ಹೊಯ್ಯುತ್ತಿರುವ ಕೆಲಸಗಾರ

Update: 2016-03-13 20:34 IST

ಶಿಕಾಗೊ, ಮಾ. 13: ಅಮೆರಿಕದ ಬಹುರಾಷ್ಟ್ರೀಯ ಆಹಾರ ಉತ್ಪಾದನೆ ಕಂಪೆನಿ ‘ಕೆಲಾಗ್ಸ್’ ರುಚಿ ರುಚಿಯಾದ ಸಿದ್ಧ ಆಹಾರ ಪದಾರ್ಥಗಳಿಗೆ ಪ್ರಸಿದ್ಧವಾಗಿದೆ. ಅದು ತಯಾರಿಸುವ ಬ್ರೇಕ್‌ಫಾಸ್ಟ್, ತಿಂಡಿಗಳು ಮತ್ತು ಬೇಳೆಕಾಳು ಆಹಾರ ಜನಪ್ರಿಯವಾಗಿವೆ.

ಆದರೆ, ದಯವಿಟ್ಟು ಕ್ಷಮಿಸಿ! ನೀವು ಕೆಲಾಗ್ಸ್‌ನ ಗ್ರಾಹಕರಾಗಿದ್ದರೆ, ಈ ಸುದ್ದಿ ಕೇಳಿ ಖಂಡಿತವಾಗಿಯೂ ಬೆಚ್ಚಿಬೀಳುತ್ತೀರಿ!

ಕಂಪೆನಿಯ ಕೆಲಸಗಾರನೊಬ್ಬ ಸಿದ್ಧಗೊಳ್ಳುತ್ತಿರುವ ಆಹಾರ ಉತ್ಪನ್ನಗಳ ಮೇಲೆ ಮೂತ್ರ ಮಾಡುತ್ತಿರುವ ವೀಡಿಯೊವೊಂದು ಎಲ್ಲೆಡೆ ಹರಡುತ್ತಿದೆ.

ಕಂಪೆನಿಯ ಅಧಿಕೃತ ಹೇಳಿಕೆಯ ಪ್ರಕಾರ, ಈ ವೀಡಿಯೊ ಟೆನೆಸಿಯ ಮೆಂಫಿಸ್‌ನಲ್ಲಿರುವ ಕಂಪೆನಿಯ ಕಾರ್ಖಾನೆಯಲ್ಲಿ ತೆಗೆದದ್ದು. ಇದನ್ನು ತೆಗೆದದ್ದು 2014ರಲ್ಲಿ. ಅಂದರೆ, ಆ ನಿರ್ದಿಷ್ಟ ಮೂತ್ರ ಮಿಶ್ರಿತ ಆಹಾರ ಪದಾರ್ಥಗಳ ಬಳಕೆ ಅವಧಿ ಈಗಾಗಲೇ ಮುಕ್ತಾಯವಾಗಿದೆ.

‘ಯೂಟ್ಯೂಬ್’ನಲ್ಲಿದ್ದ ಮೂಲ ವೀಡಿಯೊವನ್ನು ಕಂಪೆನಿ ತೆಗೆಸಿದೆ. ರೆಡಿಟ್‌ನಲ್ಲಿ ರವಾನೆಯಾಗುತ್ತಿರುವ ಈ ವೀಡಿಯೊ ಈಗ ಕಣ್ಣಿಗೆ ಬಿದ್ದಿದೆ.

ಈ ನಡುವೆ, ಕೆಲಾಗ್ಸ್ ಈ ಸ್ಪಷ್ಟೀಕರಣ ನೀಡಿದೆ: ‘‘ಈ ಘಟನೆಯನ್ನು ಕೆಲಾಗ್ಸ್ ಗಂಭೀರವಾಗಿ ಪರಿಗಣಿಸಿದೆ. ನಿನ್ನೆಯಷ್ಟೇ ಈ ಘಟನೆ ನಮ್ಮ ಗಮನಕ್ಕೆ ಬಂದಿದ್ದು, ನಮಗೆ ಆಘಾತವಾಗಿದೆ. ಈ ಬಗ್ಗೆ ನಾವು ತಕ್ಷಣ ಕಾನೂನು ಪ್ರಾಧಿಕಾರಗಳ ಗಮನವನ್ನು ಸೆಳೆದಿದ್ದೇವೆ. ಕ್ರಿಮಿನಲ್ ತನಿಖೆ ಮತ್ತು ಸಮಗ್ರ ಆಂತರಿಕ ತನಿಖೆ ಜಾರಿಯಲ್ಲಿದೆ.

ಈ ವೀಡಿಯೊವನ್ನು ಟೆನೆಸಿಯ ಮೆಂಫಿಸ್‌ನಲ್ಲಿರುವ ಕಾರ್ಖಾನೆಯಲ್ಲಿ 2014ರಲ್ಲಿ ಚಿತ್ರೀಕರಿಸಲಾಗಿತ್ತು ಎಂಬುದು ನಮ್ಮ ತನಿಖೆಯಲ್ಲಿ ತಿಳಿದುಬಂದಿದೆ. ಇದರಿಂದ ಮಲಿನಗೊಂಡಿರಬಹುದಾದ ಉತ್ಪನ್ನಗಳೆಂದರೆ ರೈಸ್ ಕ್ರಿಸ್ಪೀಸ್ ಟ್ರೀಟ್ಸ್, ರೈಸ್ ಕ್ರಿಸ್ಪೀಸ್ ಟ್ರೀಟ್ಸ್ ಸೀರಿಯಲ್ ಮತ್ತು ಪಫ್ಡ್ ರೈಸ್ ಕೇಕ್ ಉತ್ಪನ್ನಗಳು. ಇವುಗಳೆಲ್ಲದರ ಬಳಕೆ ಅವಧಿ ಮುಕ್ತಾಯಗೊಂಡಿದೆ.

ಕೆಲಾಗ್ಸ್ ಕಂಪೆನಿ ಆಹಾರ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ. ಈ ಸಂಪೂರ್ಣ ಅಸ್ವೀಕಾರಾರ್ಹ ಘಟನೆಯಿಂದ ನಾವು ಆಕ್ರೋಶಿತರಾಗಿದ್ದೇವೆ. ಈ ಘಟನೆಯ ವಿಚಾರಣೆಯಲ್ಲಿ ನಾವು ಅಧಿಕಾರಿಗಳಿಗೆ ಪೂರ್ಣ ಸಹಕಾರ ನೀಡುತ್ತಿದ್ದೇವೆ’’.

This Video Of A Kelloggs Employee Urinating On Corn Flakes Dur...

This is seriously disturbing!

Posted by Indiatimes News on Saturday, 12 March 2016

ಕೃಪೆ :indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News