×
Ad

ಬರ್ಮುಡ ಟ್ರಯಾಂಗಲ್‌ನಲ್ಲಿ ಅಪಾಯಕ್ಕೀಡಾಗುವ ಬೃಹತ್ ಹಡಗುಗಳು ಹೇಗೆ ಕಾಣೆಯಾಗುತ್ತಿವೆ?

Update: 2016-03-14 16:15 IST

ಬರ್ಮುಡ, ಮಾಚ್.14: ಹಡಗುಗಳು ವಿಮಾನಗಳ ಶವತೊಟ್ಟಿಲೆನ್ನಲಾದ ಬರ್ಮುಡ ಟ್ರಯಾಂಗಲ್‌ನ್ನು ಕರೆಯುವುದು ರೂಢಿ. ಇಲ್ಲಿ ಅಪಘಾತಕ್ಕೀಡಾಗುವ ಬೃಹತ್ ಹಡಗುಗಳು ಕೂಡಾ ಕಣ್ಣಿಗೆ ಕಾಣಿಸದಂತೆ ಮಾಯವಾಗತ್ತವೆ. ಹೀಗೇಕೆ ಆಗುತ್ತಿವೆ ಎಂಬ ಅಚ್ಚರಿಗೆ ಕೊನೆಗೂ ವಿಜ್ಞಾನಿಗಳ ಮೂಲಕ ಒಂದು ಪರಿಹಾರ ಸಿಕ್ಕಿದೆ.

ಬರ್ಮುಡ ಟ್ರಯಾಂಗಲ್ ಸಮುದ್ರದೊಳಗೆ ಭಾರಿ ತೂತುಗಳಿವೆ. ಅಪಘಾತಕ್ಕೊಳಗಾದರೆ ಹಡಗುಗಳ ಅವಶೇಷಗಳು ಕೂಡಾ ಸಿಗಂದಂತೆ ಆ ತೂತುಗಳೊಳಗೆ ಹಡಗುಗಳು ತೂರಿಕೊಳ್ಳುತ್ತವೆ. ಆದ್ದರಿಂದ ಅವಗಡಕ್ಕೊಳಗಾಗುವ ಹಡಗುಗಳನ್ನು ಮತ್ತೆಂದೂ ಪತ್ತೆ ಮಾಡಲು ಸಾಧ್ಯವಾಗಿಲ್ಲ ಎಂದು ವಿಜ್ಞಾನಿಗಳು ಸಂಶೋಧನೆ ಮಾಡಿ ತಿಳಿಸಿದ್ದಾರೆ. ಭಾರೀ ಅಂದರೆ 150 ಅಡಿ ಆಳದ ಕಂದರಗಳು ಸಮುದ್ರದೊಳಗಿವೆ. ಭಾರೀ ಅಗಲವೂ ಆಗಿವೆ ಎಂದು ವಿಜ್ಞಾನ ಜಗತ್ತು ಜಗತ್ತಿನ ಮುಂದೆ ಬಹಿರಂಗ ಪಡಿಸಿದೆ.

ಮಿಥೈಲ್ ಅನಿಲದ ಪ್ರಭಾವ ಕೇಂದ್ರ ಈ ದೊಡ್ಡ ದ್ವಾರಗಳೆಂದು ನಾರ್ವೆಯ ಆರ್ಟಿಕ್ ಯುನಿವರ್ಸಿಟಿಯ ವಿಜ್ಞಾನಿಗಳು ಹೇಳುತ್ತಾರೆ. ಇದರೊಳಗಾಗುವ ಸ್ಫೋಟಗಳಿಂದಾಗಿ ಬಾರಂಟ್ಸ್‌ಸಮುದ್ರದ ಮೂಲಕ ಹಾದು ಹೋಗುವ ಹಡಗುಗಳು ದುರಂತಕ್ಕೊಳಗಾಗುತ್ತಿವೆ ಎಂದು ಅವರ ಅಭಿಮತ. ಹಡಗುಗಳನ್ನು ಸ್ಫೋಟವು ಒಳಗೆ ಸೆಳೆಯುತ್ತದೆ ನಂತರ ಅದನ್ನು ಮಾಯಮಾಡುತ್ತವೆ ಅಂದರೆ ಅದನ್ನು ಪತ್ತೆಯಾಗದಂತೆ ಮಾಡುತ್ತಿವೆ. ಉತ್ತರ ಅಟ್ಲಾಂಟಿಕ್ ಸಮುದ್ರದ ಬ್ರಿಟಿಷ್ ಓವರ್‌ಸೀಸ್ ಟೆರಿಟರಿಯಿಂದ ಹಿಡಿದು ಪ್ಲೋರಿಡಾ ತೀರದವರೆಗೂ ಪ್ಯೂರ್ಟೋರಿಕಾ ವರೆಗೂ ಬರ್ಮುಡ ಟ್ರಯಾಂಗಲ್ ವಿಸ್ತಾರವಾಗಿದೆ. ಪ್ರಕೃತಿ ಅನಿಲ ಶೇಖರಣೆಯಿಂದಾಗಿ ಸ್ಫೋಟ ಸಂಭವಿಸುತ್ತಿದ್ದು ಅದರಿಂದಾಗಿ ಬರ್ಮುಡ ಟ್ರಯಾಂಗಲ್ ಅಪಾಯಕಾರಿ ಅಪಘಾತಗಳಿಗೆ ಹೇತುವಾಗಿವೆ ಎಂದು ಈ ಮೊದಲೂ ವಿಜ್ಞಾನಿಗಳು ಹೇಳಿದ್ದರು.

ಮಿಥೇನ್ ಅನಿಲಗಳಾಗಿ ಪರಿವರ್ತಿತವಾಗುವಾಗ ಉಂಟಾಗುವ ಕ್ರಿಯೆ ಸಮುದ್ರದೊಳಗೆ ನಡೆಯುತ್ತಿದೆ. ಇದರ ಅಂಗವಾಗಿ ಹಡಗುಗಳು ಮತ್ತು ವಿಮಾನಗಳೂ ಟ್ಟಯಾಂಗಲ್‌ನಲ್ಲಿ ದುರಂತಕ್ಕೊಳಗಾಗುತ್ತಿವೆ ಎಂದು ರಷ್ಯನ್ ವಿಜ್ಞಾನಿ ಇಗರ್ ಯೆಲ್ಸೋವ್ ಕಳೆದ ವರ್ಷ ಸ್ಪಷ್ಟ ಪಡಿಸಿದ್ದರು. ಮೊದಲು ವಿಮಾನಗಳು ಮತ್ತು ಹಡಗುಗಳು ಅಪ್ರತ್ಯಕ್ಷವಾಗುತ್ತಿದ್ದಾಗ ಬರ್ಮುಡ ಟ್ರಯಾಂಗಲ್‌ಗೆ ಸಂಬಂಧಿಸಿ ಸುದ್ದಿಗಳು ಪ್ರಕಟವಾಗುತ್ತಿದ್ದವು. 1945 ಡಿಸೆಂಬರ್ ಐದರಂದು ಅಟ್ಲಾಂಟಿಕ್ ಸಮುದ್ರದದಲ್ಲಿ ಮಾಯವಾದ ವಿಮಾನ ನಂಬ್ರ 19 ಬರ್ಮುಡ ಟ್ರಯಾಂಗಲ್‌ನ ಕುರಿತ ಕಥೆಗಳನ್ನು ಬಲಪಡಿಸಿದ್ದವು. ಫ್ಲೋರಿಡಾದ ಪೋರ್ಟ್ ಲಾಂಡರ್‌ಡೋಲ್‌ನಿಂದ ಆರು ನೌಕಾಪಡೆಯ ವಿಮಾನಗಳು ಹೊರಟಿದ್ದವು. ಚಾರ್ಲ್ಸ್ ಟೈಲರ್‌ನೇತೃತ್ವದಲ್ಲಿ ಹಾರಿದ್ದ ನೌಕಾಪಡೆ ವಿಮಾನ ಒಂದೂವರೆಗಂಟೆಯೊಳಗೆ ಸಮುದ್ರಕ್ಕೆ ಬಿದ್ದು ನಾಶವಾಗಿತ್ತು. ವಿಶೇಷ ಸ್ಥಳಕ್ಕೆ ಹೋದಾಗ ವೈಮಾನಿಕರ ದಿಕ್ಕು ತಪ್ಪಿ ನಿಯಂತ್ರಣ ಕಳಕೊಂಡು ಪತನವಾಯಿತೆಂದು ಸೂಚನೆ ಲಭಿಸಿತ್ತು. ಹದಿನಾಲ್ಕು ಸೈನಿಕರ ಸಹಿತ ವಿಮಾನದ ನೌಕರರು ಸಮುದ್ರದಲ್ಲಿ ಇನ್ನಿಲ್ಲದಂತೆ ಮಾಯವಾದರು.

ವಿಮಾನಗಳನ್ನು ಹುಡುಕಲು ಹೊರಟ ವಿಮಾನಗಳಲ್ಲೊಂದು ಇದೇ ರೀತಿಯ ದುರಂತಕ್ಕೊಳಗಾಗಿತ್ತು. ಈ ವಿಮಾನದಲ್ಲಿದ್ದ ಹದಿಮೂರು ಮಂದಿಯೂ ಮೃತರಾದರು. 1948 ಜನವರಿ ಮೂವತ್ತಕ್ಕೆ ಸೈಂಟ್ ಮರಿಯದಿಂದ ಬರ್ಮುಡಕ್ಕೆ ಹೊರಟ ಬ್ರಿಟಿಷ್ ಸೌತ್ ಅಮೆರಿಕನ್ ಏರ್‌ಪೋರ್ಟ್ನ ನ ಸ್ಟಾರ್ ಟೈಗರ್ ಎಂಬ ವಿಮಾನವೂ ಬರ್ಮುಡ ಟ್ರಯಾಂಗಲ್‌ನಲ್ಲಿ ಅಪ್ರತ್ಯಕ್ಷವಾಯಿತು. ಇಪ್ಪತ್ತೈದು ಪ್ರಯಾಣಿಕರಿದ್ದ ವಿಮಾನ ಕೆಟ್ಟ ಹವಾಮಾನದಿಂದಾಗಿ ಪತನವಾಯಿತೆಂದು ಹೇಳಲಾಯಿತು. ಬ್ರಿಟಿಷ್ ಸೌತ್ ಅಮೆರಿಕನ್ ಏರ್‌ಫೊರ್ಸ್ ವಿಮಾನಗಳಲ್ಲೊಂದು ಅರ್ಜೆಂಟೈನಾದ ಬ್ಯೂನಸ್ ಐರಿಸ್‌ನಿಂದ ಚಿಲಿಯ ಸಾಂಟಿಯಾಗೋಕ್ಕೆ ಹಾರುತ್ತಿದ್ದಾಗ ಅಪ್ರತ್ಯಕ್ಷವಾಯಿತು. 1947 ಆಗಸ್ಟ್ ಎರಡಕ್ಕೆ ಈ ದುರಂತ ಸಂಭವಿಸಿತ್ತು. ಆಂಡೀಸ್ ಪರ್ವತ ರೇಖೆಯ ಮೇಲ್ಭಾಗದಲ್ಲಿ ಹಾರುತ್ತಿದ್ದ ವಿಮಾನ ತನ್ನ ಉದ್ದೇಶಿತ ತಾಣಕ್ಕೆ ತಲುಪಲು ಸಾಧ್ಯವಾಗಲಿಲ್ಲ. ವಿಮಾನಕ್ಕೆ ಏನಾಯಿತೆಂದು ಆನಂತರ ಯಾರಿಗೂ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಏನೆಲ್ಲಾ ಕಥೆಗಳು ವಿಮಾನ ಕಾಣೆಯಾದುದರ ಬಗ್ಗೆ ಹುಟ್ಟಿಕೊಂಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News