ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ದಿಲ್ಲಿ ವಿವಿ ವಿದ್ಯಾರ್ಥಿ ನಾಯಕ
ನವದೆಹಲಿ : ಜೆಎನ್‌ಯು ಕ್ಯಾಂಪಸ್ ಪ್ರವೇಶಿಸಿ ಅಲ್ಲಿನ ‘ದೇಶದ್ರೋಹಿ’ಗಳನ್ನು ಗುಂಡಿಕ್ಕುವುದಾಗಿ ಬೆದರಿಸಿದ್ದ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷ ಸತೇಂದರ್ ಅವಾನ ಇದೀಗ ಕೊಲೆಯತ್ನ, ಲೈಂಗಿಕ ಕಿರುಕುಳ ಹಾಗೂ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ಎದುರಿಸುತ್ತಿದ್ದಾರೆಂದು ದಿ ಪಯೋನೀರ್ ವರದಿ ಮಾಡಿದೆ. ಈ ವರದಿಯ ಪ್ರಕಾರ ಸತೇಂದರ್ ವಿರುದ್ಧ ನೊಯ್ಡಾದ ಸೆಕ್ಟರ್-20 ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬಳು ಪ್ರಕರಣ ದಾಖಲಿಸಿದ್ದಾರೆ.
ಸತೇಂದರ್ ಹೊರತಾಗಿ ಅವರ ತಾಯಿ ಬಾಲಶೇರಿ, ಮೈದುನರಾದ ನಕುಲ್ ಅವಾನ, ಸತೇಂದರ್ ಅವಾನ ಹಾಗೂ ನಾದಿನಿಯರು ವರದಕ್ಷಿಣೆ ವಿವಾದವೊಂದರ ನಂತರ ಆಕೆಗೆ ಹಲ್ಲೆಗೈದು ಆಕೆಯ ಕತ್ತು ಹಿಚುಕಲು ಯತ್ನಿಸಿದರೆಂದು ದೂರಿನಲ್ಲಿ ಆರೋಪಿಸಲಾಗಿದೆ.
ಆರೋಪಿಗಳು ದೂರುದಾರಳನ್ನು ಬೆದರಿಸುತ್ತಿರುವ ವೀಡಿಯೋ ಇದೆಯೆಂದು ಪೊಲೀಸರು ತಿಳಿಸಿದ್ದಾರೆ. ಆದರೆ ತನ್ನ ಫೇಸ್ಬುಕ್ ಪುಟದಲ್ಲಿ ಈ ಪ್ರಕರಣದ ಬಗ್ಗೆ ಸ್ಪಷ್ಟೀಕರಣ ನೀಡಿದ ಸತೇಂದರ್ಪೊಲೀಸರು ಬಂದ ನಂತರವಷ್ಟೇವರದಕ್ಷಿಣೆ ಬಗ್ಗೆ ತನ್ನಹಾಗೂ ತನ್ನ ಕುಟುಂಬದವರ ವಿರುದ್ಧ ಆರೋಪ ಹೊರಿಸಲಾಯಿತು ಎಂದು ಹೇಳಿದ್ದಾರೆ.
‘‘ದೇಶಕ್ಕಾಗಿ ಎದ್ದು ನಿಂತ ಜೆಎನ್‌ಯುವಿನಲ್ಲಿರುವ ನಮ್ಮ ಸಹೋದರರು ನಮಗೆ ಏನಾಗುತ್ತಿದೆಯೆಂದು ಹೇಳಿದರು. ಇಂತಹ ಜನರಿಗೆ ಶಿಕ್ಷೆ ನೀಡದಿದ್ದಲ್ಲಿಜಾಗೃತ ಯುವಕರಾದ ನಾವು ಕ್ಯಾಂಪಸ್ ಪ್ರವೇಶಿಸಿ ದೇಶದ್ರೋಹಿಗಳಿಗೆ ಗುಂಡಿಕ್ಕುತ್ತೇವೆ,’’ ಎಂದು ಜೆಎನ್‌ಯು ಹಗರಣ ಫೆಬ್ರವರಿಯಲ್ಲಿನಡೆದ ಬಳಿಕಅಲ್ಲಿನ ವಿದ್ಯಾರ್ಥಿಗಳ ಬಗ್ಗೆ ಪ್ರತಿಕ್ರಿಯಿಸುತ್ತಾ ಸತೇಂದರ್ ಹೇಳಿದ್ದನ್ನು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿತ್ತು.
ಕಳೆದ ವರ್ಷ ಎಬಿವಿಪಿಯ ಅಧ್ಯಕ್ಷರೂ ಆಗಿದ್ದ ಸತೇಂದರ್ಜನವರಿಯಲ್ಲಿ ಕ್ಯಾಂಪಸ್ಸಿಗೆ ಬಂದು ‘ಸಹಮತದ ಸೆಕ್ಸ್’ ಬಗ್ಗೆ ವಿದ್ಯಾರ್ಥಿಗಳ ಅಭಿಪ್ರಾಯ ಕೇಳುತ್ತಿದ್ದ ‘ಕ್ವಿಂಟ್’ ಪತ್ರಕರ್ತರನ್ನು ನಿಂದಿಸಿದ್ದರೆಂದೂ ಆರೋಪಿಸಲಾಗಿತ್ತು. ‘ಅವರು ನಮ್ಮ ಪ್ರಶ್ನಾವಳಿಗಳನ್ನು ಸೆಳೆದು, ನಮ್ಮ ಕ್ಯಾಮರಾಮ್ಯಾನ್ ಮೇಲೆ ಹಲ್ಲೆಗೈದು, ನಮ್ಮನ್ನು ಸುತ್ತುವರಿದು ಬೆದರಿಕೆ ಹಾಕಿದರು. ನಮ್ಮನ್ನು ವಿವಿಧ ಕೆಟ್ಟ ಹೆಸರುಗಳಿಂದ ಕರೆಯಲಾಯಿತು ಹಾಗೂ ನಾವು ಸ್ವೇಚ್ಛಾಚಾರದ ಸೆಕ್ಸ್ ನಡೆಸುವವರೆಂದೂ ಅದರ ಬಗ್ಗೆ ಬಹಿರಂಗವಾಗಿ ಮಾತನಾಡಲು ಪ್ರಯತ್ನಿಸುವವರೆಂದೂ ನಮ್ಮನ್ನು ಹೀಗಳೆಯಲಾಗಿತ್ತು,’’ ಎಂದು ‘ಕ್ವಿಂಟ್’ ಪತ್ರಕರ್ತರು ದೂರಿದ್ದರು.