×
Ad

ಭಾರತೀಯರು ಸ್ಮಾರ್ಟ್, ಅವರನ್ನು ಹೊರಹಾಕಬೇಡಿ : ಟ್ರಂಪ್

Update: 2016-03-15 17:31 IST

ವಾಶಿಂಗ್ಟನ್, ಮಾ. 15 : ಮೊದಲ ಬಾರಿ ಡೊನಾಲ್ಡ್ ಟ್ರಂಪ್ ಧನಾತ್ಮಕ ಮಾತನ್ನಾಡಿದ್ದಾರೆ. ಭಾರತೀಯ ವಿದ್ಯಾರ್ಥಿಗಳನ್ನು ದೇಶದಿಂದ ಹೊರಹಾಕಬಾರದು. ಏಕೆಂದರೆ ಅವರಂತಹ ಸ್ಮಾರ್ಟ್ ಜನರು ನಮ್ಮ ದೇಶಕ್ಕೆ ಬೇಕು ಎಂದಿದ್ದಾರೆ ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ . 

" ನಮಗೆ ಇಶ್ತವಿರಲಿ , ಇಲ್ಲದಿರಲಿ, ಅವರು ಪಾವತಿಸುತ್ತಾರೆ, ನಾವು ಬಹಳಷ್ಟು ಜನರಿಗೆ ಶಿಕ್ಷಣ ನೀಡುತ್ತಿದ್ದೇವೆ , ಬಹಳ ಸ್ಮಾರ್ಟ್ ಜನರು ಅವರು, ನಮಗೆ ಅವರು ನಮ್ಮ ದೇಶಕ್ಕೆ ಬೇಕು " ಎಂದು ಫಾಕ್ಸ್ ನ್ಯೂಸ್ ಸಂದರ್ಶನದಲ್ಲಿ ಸಕ್ರಮ ವಲಸಿಗರ ಬಗ್ಗೆ  ಕೇಳಿದಾಗ ಹೇಳಿದ್ದಾರೆ. 

" ಅವರು ದೇಶದೊಳಗೆ ಬರಲಾರರು , ನಿಮಗೆ ಗೊತ್ತು. ಅವರು ಹಾರ್ವರ್ಡ್ ಗೆ ಹೋಗುತ್ತಾರೆ. ಅಲ್ಲಿ ಅತ್ಯುತ್ತಮ ಸ್ಥಾನ ಗಳಿಸುತ್ತಾರೆ. ಮತ್ತೆ ಭಾರತಕ್ಕೆ ಹೋಗಿ ಅಲ್ಲಿ ಕಂಪೆನಿಗಳನ್ನು ಮಾಡಿ ದೊಡ್ಡ ಸಂಪತ್ತು ಗಳಿಸುತ್ತಾರೆ ಹಾಗು ಸಾಕಷ್ಟು ಜನರಿಗೆ ಉದ್ಯೋಗ ನೀಡುತ್ತಾರೆ. ಅವರಲ್ಲಿ ಹಲವರಿಗೆ ಇಲ್ಲೇ ಇದ್ದು ಹಾಗೆ ಮಾಡಬೇಕು ಎಂದಿರುತ್ತದೆ. ನನ್ನ ಪ್ರಕಾರ ಇಲ್ಲಿ ಸಾಕಷ್ಟು ವರ್ಷ ವಿದ್ಯಾಭ್ಯಾಸ ಮಾಡಿದವರು ಪದವಿ ಪಡೆದ ಕೂಡಲೇ ಅವರನ್ನು ನಾವು ಹೊರದೂದಬಾರದು . ಈಗ ನಾವು ಹಾಗೆ ಮಾಡುತ್ತಿದ್ದೇವೆ " ಎಂದು ಟ್ರಂಪ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News