ವಲಸಿಗರು ವಿಷದ ಹಾವುಗಳಂತೆ: ಡೊನಾಲ್ಡ್ ಟ್ರಂಪ್
Update: 2016-03-15 20:22 IST
ವಾಶಿಂಗ್ಟನ್, ಮಾ. 15: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿಯಾಗಿರುವ ಡೊನಾಲ್ಡ್ ಟ್ರಂಪ್ ಅಮೆರಿಕಕ್ಕೆ ಬರುವ ವಲಸಿಗರನ್ನು ‘‘ದಯೆ ತೋರಿಸಿದ ವ್ಯಕ್ತಿಗೆ ಕಡಿಯುವ’’ ವಿಷದ ಹಾವಿಗೆ ಹೋಲಿಸಿದ್ದಾರೆ.
ಯಂಗ್ಸ್‌ಟೌನ್ ವಿಮಾನ ನಿಲ್ದಾಣದಲ್ಲಿ ಖಾಸಗಿ ಕೂಟವೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ವಲಸಿಗರ ಬಗ್ಗೆ ತಾನು ಹೊಂದಿರುವ ದೃಢ ನಿಲುವನ್ನು ಪುನರುಚ್ಚರಿಸಿದರು.
‘‘ನಾವು ಯಾರನ್ನು ಒಳಗೆ ಬಿಡುತ್ತಿದ್ದೇವೆ ಎಂಬುದು ನಮಗೆ ಗೊತ್ತಿದೆ ಎನ್ನುವುದನ್ನು ನಾವು ಖಾತರಿಪಡಿಸಿಕೊಳ್ಳಬೇಕು’’ ಎಂದು ತನ್ನ ಅಭಿಮಾನಿಗಳ ಹರ್ಷೋದ್ಗಾರಗಳ ನಡುವೆ ಟ್ರಂಪ್ ಹೇಳಿದರು.