ಚೀನಿ ಮೀನುಗಾರಿಕೆ ದೋಣಿ ಮುಳುಗಿಸಿದ ಅರ್ಜೆಂಟೀನ
ಬ್ಯೂನಸ್ ಐರಿಸ್, ಮಾ.16: ಅಕ್ರಮವಾಗಿ ತನ್ನ ಸಾಗರ ಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಚೀನದ ಮೀನುಗಾರಿಕಾ ದೋಣಿಯೊಂದನ್ನು ತಾನು ಮುಳುಗಿಸಿರುವುದಾಗಿ ಅರ್ಜೆಂಟೀನದ ನೌಕಾಪಡೆ ಬುಧವಾರ ಘೋಷಿಸಿದೆ.ಈ ಬಗ್ಗೆ ಚೀನ ಸರಕಾರವು ಅರ್ಜೆಂಟೀನಗೆ ತನ್ನ ಗಂಭೀರ ಕಳವಳವನ್ನು ವ್ಯಕ್ತಪಡಿಸಿದೆ ಹಾಗೂ ಈ ಬಗ್ಗೆ ತನಿಖೆಗೆ ಆದೇಶಿಸಿದೆ. ಬ್ಯೂನಸ್ ಐರಿಸ್‌ನಿಂದ 1,460 ಕಿ.ಮೀ. ದಕ್ಷಿಣದಲ್ಲಿರುವ ಪೊರ್ಟೊ ಮ್ಯಾಡಿರಿನ್ ಕರಾವಳಿ ತೀರದಲ್ಲಿ ಸೋಮವಾರ ಚೀನಿ ದೋಣಿಯನ್ನು ತಾನು ತಡೆದಿರುವುದಾಗಿ ಅರ್ಜೆಂಟೀನ ನೌಕಾಪಡೆಯು ಮಂಗಳವಾರ ತಿಳಿಸಿದೆ. ತಾನು ನೀಡಿದ ಎಚ್ಚರಿಕೆಯ ಕರೆಗಳನ್ನು ಚೀನಿ ಮೀನುಗಾರಿಕಾ ದೋಣಿಯು ಕೇಳಲಿಲ್ಲ. ಬದಲಿಗೆ ಅದು ಅರ್ಜೆಂಟೀನದ ನೌಕಾಪಡೆಯ ದೋಣಿಗೆ ಡಿಕ್ಕಿ ಹೊಡೆಯಲು ಯತ್ನಿಸಿತೆಂದು ಹೇಳಿಕೆಯು ತಿಳಿಸಿದೆ. ಆನಂತರ ನೌಕಾಪಡೆಯ ಯೋಧರು, ಮೀನುಗಾರಿಕಾ ದೋಣಿಯ ವಿವಿಧ ಭಾಗಗಳಿಗೆ ಗುಂಡೆಸೆದ ಕಾರಣ, ರಂಧ್ರವುಂಟಾಗಿ ಅದು ಜಲಸಮಾಯಾಯಿತೆಂದು ಅರ್ಜೆಂಟೀನ ನೌಕಾಪಡೆಯ ಹೇಳಿಕೆ ತಿಳಿಸಿದೆ. ಜಲಸಮಾಯಾದ ಚೀನಿ ದೋಣಿಯಲ್ಲಿದ್ದ ನಾಲ್ವರನ್ನು ರಕ್ಷಿಸಲಾಗಿದ್ದು, ಅವರನ್ನು ಬಂಸಲಾಗಿದೆಯೆಂದು ಅರ್ಜೆಂಟೀನ ನೌಕಾಪಡೆಯ ಮೂಲಗಳು ತಿಳಿಸಿವೆ. ಪ್ರಸ್ತುತ ನೌಕಾಪಡೆಯ ಕಸ್ಟಡಿಯಲ್ಲಿರುವ ಅವರನ್ನು ಶೀಘ್ರವೇ ಅರ್ಜೆಂಟೀನದ ದಕ್ಷಿಣ ಚುಬುಟ್ ಪ್ರಾಂತ್ಯದ ೆಡರಲ್ ನ್ಯಾಯಾೀಶರ ಮುಂದೆ ಹಾಜರುಪಡಿಸಲಾಗುವುದೆಂದು ಹೇಳಿಕೆಯು ತಿಳಿಸಿದೆ.
ಈ ಮಧ್ಯೆ ಚೀನಾದ ವಿದೇಶಾಂಗ ವಕ್ತಾರ ಲುಕುವಾಂಗ್, ತನ್ನ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಪ್ರಸಾರ ಮಾಡಿದ ಹೇಳಿಕೆಯೊಂದರಲ್ಲಿ ಅರ್ಜೆಂಟೀನ ನೌಕಾಪಡೆಯು ಚೀನಾದ ಮೀನುಗಾರಿಕಾ ದೋಣಿಯನ್ನು ಹಲವು ತಾಸುಗಳ ಕಾಲ ಬೆನ್ನಟ್ಟಿ ಗುಂಡುಹಾರಿಸುವ ಮೂಲಕ ಅದನ್ನು ಜಲಸಮಾಗೊಳಿಸಿತೆಂದು ಹೇಳಿದೆ. ದೋಣಿಯಲ್ಲಿದ್ದ ನಾಲ್ವರನ್ನು ಅರ್ಜೆಂಟೀನಾ ಬಂಸಿದ್ದು, 28ಕ್ಕೂ ಅಕ ಮಂದಿಯನ್ನು ಸಮೀಪದಲ್ಲಿದ್ದ ಚೀನಿ ನೌಕೆಯ ಸಿಬ್ಬಂದಿ ರಕ್ಷಿಸಿದರೆಂದು ತಿಳಿಸಿದೆ.