×
Ad

ಮಸೀದಿ ನಿರ್ಮಾಣಕ್ಕಾಗಿ ಚಂದಾ ಸಂಗ್ರಹ ವಿರುದ್ಧಎಚ್ಚರಿಕೆ

Update: 2016-03-16 23:08 IST

ಜಿದ್ದಾ, ಮಾ.16: ಮಸೀದಿ ನಿರ್ಮಾಣ ಅಥವಾ ಅವುಗಳ ಜೀರ್ಣೋದ್ಧಾರಕ್ಕಾಗಿ ಕಾನೂನುಬಾಹಿರವಾಗಿ ನಿಗಳನ್ನು ಸಂಗ್ರಹಿಸುವ ವಿರುದ್ಧ ಖಾಸಿಮ್‌ನ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ ಬುಧವಾರ ಎಚ್ಚರಿಕೆ ನೀಡಿದೆ. ಮಸೀದಿಗಳನ್ನು ನಿರ್ಮಿಸಲು ಬಯಸುವವರು, ತಮ್ಮ ಸ್ವಂತ ಸಂಪನ್ಮೂಲಗಳನ್ನು ಅದಕ್ಕೆ ವಿನಿಯೋಗಿಸಬೇಕೆಂದು ಖಾಸಿಮ್‌ನ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯದ ನಿರ್ದೇಶಕ ಅಬ್ದುಲ್ಲಾ ಮುಹಮ್ಮದ್ ಅಲ್-ಮಜ್‌ಮಾಜ್ ಹೇಳಿರುವುದಾಗಿ ಸ್ಥಳೀಯ ಪತ್ರಿಕೆಯೊಂದು ಮಂಗಳವಾರ ವರದಿ ಮಾಡಿದೆ.
     ಮಸೀದಿಯನ್ನು ನಿರ್ಮಿಸಲು, ಜೀರ್ಣೋದ್ಧಾರ ಮಾಡಲು ಅಥವಾ ನಿರ್ವಹಣೆಗಾಗಿ ನಿಧಿಯನ್ನು ಸಂಗ್ರಹಿಸಲು ಬಯಸುವ ಯಾವುದೇ ವ್ಯಕ್ತಿಯು ಈ ಬಗ್ಗೆ ಸಚಿವಾಲಯಕ್ಕೆ ಮಾಹಿತಿ ನೀಡಬೇಕೆಂದು ಸಚಿವಾಲಯದ ನಿಯಮಾವಳಿಗಳಲ್ಲಿ ಸೂಚಿಸಲಾಗಿದೆ. ತಾನು ಮಸೀದಿಯ ನಿರ್ಮಾಣ ಅಥವಾ ಜೀರ್ಣೋದ್ಧಾರಕ್ಕಾಗಿ ಹಣವನ್ನು ದಾನ ಮಾಡುವ ವ್ಯಕ್ತಿಯು ಇದಕ್ಕಾಗಿ ತಾನು ಬೇರೆಯವರಿಂದ ಚಂದಾ ಎತ್ತಿಲ್ಲವೆಂದು ಹೇಳುವ ಘೋಷಣಾ ಪತ್ರಕ್ಕೆ ಸಹಿಹಾಕಬೇಕೆಂದು ಅಬ್ದುಲ್ಲಾ ಮುಹಮ್ಮದ್ ಅಲ್-ಮಜ್‌ಮಾಜ್ ತಿಳಿಸಿದ್ದಾರೆ. ಯಾವುದೇ ದೇಣಿಗೆಯನ್ನು ವ್ಯಕ್ತಿಗಳು ನಗದು ಅಥವಾ ವಸ್ತುವಿನ ರೂಪದಲ್ಲಿ ಸಂಗ್ರಹಿಸಲು ಅನುಮತಿ ನೀಡಲಾಗುವುದಿಲ್ಲವೆಂದು ಅವರು ಹೇಳಿದ್ದಾರೆ. ಕೇವಲ ಅಕೃತವಾಗಿ ಮಾನ್ಯತೆ ಪಡೆದಿರುವ ಸೇವಾ (ಚಾರಿಟಿ) ಸಂಸ್ಥೆಗಳಿಗೆ ಮಾತ್ರ ಸಾರ್ವಜನಿಕರಿಂದ ನಿಯನ್ನು ಸಂಗ್ರಹಿಸಲು ಅನುಮತಿ ನೀಡಲಾಗಿದೆಯೆಂದು ಅವರು ಹೇಳಿದ್ದಾರೆ.

ತಮ್ಮ ಪ್ರಾಂತ್ಯದಲ್ಲಿ ಮಸೀದಿಯೊಂದನ್ನು ನಿರ್ಮಿಸುವುದಕ್ಕಾಗಿ ಕೆಲವು ವ್ಯಕ್ತಿಗಳು ನಿಯನ್ನು ಸಂಗ್ರಹಿಸಲು ಪ್ರಯತ್ನಿಸು ತ್ತಿದ್ದಾರೆಂದು ತಿಳಿದು ಬಂದ ಹಿನ್ನೆಲೆಯಲ್ಲಿ ಸಚಿವಾಲಯವು ಈ ಎಚ್ಚರಿಕೆಯನ್ನು ನೀಡಿದೆ. ದೇಶದ ಕಾನೂನನ್ನು ಉಲ್ಲಂಸಿದ ಆರೋಪದಲ್ಲಿ ಅವರ ವಿರುದ್ಧ ಕಾನೂನುಕ್ರಮವನ್ನು ಕೈಗೊಳ್ಳಲಾಗುವುದೆಂದು ಅವರು ತಿಳಿಸಿದ್ದಾರೆ.ಈ ಮೊದಲು ಅಂತರಿಕ ಸಚಿವಾಲಯವು ಹೇಳಿಕೆಯೊಂದನ್ನು ನೀಡಿ, ಸಾರ್ವಜನಿಕರಿಂದ ನಿಸಂಗ್ರಹಣೆಯನ್ನು ನಿಯಂತ್ರಿಸುವುದಕ್ಕಾಗಿ ಆಂತರಿಕ ಸಚಿವಾಲಯವು ನೂತನ ಕಾನೂನುಗಳನ್ನು ಪ್ರಕಟಿಸಿದೆ. ನಾಗರಿಕರು ಕ್ರಿಮಿನಲ್‌ಗಳ ಬಲೆಗೆ ಸಿಲುಕುವುದನ್ನು ತಪ್ಪಿಸಲು ತಾನು ಈ ಕ್ರಮಗಳನ್ನು ಕೈಗೊಂಡಿರುವುದಾಗಿ ಅದು ಹೇಳಿದೆ. ಮಸೀದಿಗಳನ್ನು ನಿರ್ಮಿಸಲು ಅಥವಾ ನವೀಕರಿಸುವ ಉದ್ದೇಶದಿಂದ ತೆರೆಯಲಾದ ವಿಶೇಷ ಖಾತೆಗಳಿಗೆ ಎಟಿಎಂ ಹಾಗೂ ಕ್ರೆಡಿಟ್ ಕಾರ್ಡ್ ಸೌಲಭ್ಯಗಳನ್ನು ನೀಡದಂತೆ ಬ್ಯಾಂಕ್‌ಗಳಿಗೆ ಆದೇಶಿಸುವ ಸುತ್ತೋಲೆಯೊಂದನ್ನು ಕೂಡಾ ಸೌದಿ ಅರೇಬಿಯ ಹಣಕಾಸು ಏಜೆನ್ಸಿ ಬಿಡುಗಡೆಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News