×
Ad

ಬಿಜೆಪಿ ಎಲ್ಲರಿಗಿಂತ ಹೆಚ್ಚು ದೇಶವಿರೋಧಿ: ಕೇಜ್ರಿ

Update: 2016-03-16 23:47 IST

ಹೊಸದಿಲ್ಲಿ, ಮಾ.16: ಬಿಜೆಪಿ ಎಲ್ಲರಿಗಿಂತ ಹೆಚ್ಚು ದೇಶವಿರೋಧಿಯೆಂದು ಇಂದು ಹೊಸದಾಗಿ ವಾಗ್ದಾಳಿ ನಡೆಸಿರುವ ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಅದು ಜವಾಹರ ಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ ನಿಜವಾದ ಅಪರಾಧಿಗಳನ್ನು ರಕ್ಷಿಸುತ್ತಿದೆಯೆಂದು ಆರೋಪಿಸಿದ್ದಾರೆ.

ಜೆಎನ್‌ಯು ಆವರಣದಲ್ಲಿ ಫೆ.9ರಂದು ನಡೆದಿದ್ದ ವಿವಾದಿತ ಕಾರ್ಯಕ್ರಮದಲ್ಲಿ ಪ್ರಚೋದ ನಾತ್ಮಕ ಘೋಷಣೆಗಳನ್ನು ಕೂಗಿದ್ದು, ‘ಒಂದು ಹೊರಗಿನವರ ಗುಂಪು’ ಎಂದು ಜೆಎನ್‌ಯು ಸಮಿತಿಯೊಂದು ವರದಿ ನೀಡಿರುವ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಬಿಜೆಪಿಯ ಮೇಲೆ ಹೊಸ ದಾಳಿ ನಡೆಸಿದ್ದಾರೆ.

ಈ ಹಿಂದೆ ಫೆಬ್ರವರಿ 29ರಂದು ಹೈದರಾ ಬಾದ್ ಪೊಲೀಸರು ದೇಶದ್ರೋಹದ ಆರೋಪ ದಲ್ಲಿ ದಾಖಲಿಸಿದ್ದ ಎಫ್‌ಐಆರ್‌ನಲ್ಲಿ ಕೇಜ್ರಿವಾಲ್‌ರನ್ನು ಹೆಸರಿಸಿದ್ದರು. ಆಗ ಅವರು, ತಾನು ಪ್ರಧಾನಿ ನರೇಂದ್ರ ಮೋದಿಯವರಿಗಿಂತ ‘ದೊಡ್ಡ ದೇಶ ಭಕ್ತ’ ಎಂದಿದ್ದರು ಹಾಗೂ ಜೆಎನ್‌ಯು ಪ್ರಕರಣದ ‘ನಿಜವಾದ ದೇಶದ್ರೋಹಿಗಳನ್ನು’ ಬಂಧಿಸಿ ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿಯವರನ್ನು ಅಸಮಾಧಾನಗೊಳಿಸಲು ಬಿಜೆಪಿ ಬಯಸುತ್ತಿಲ್ಲ ಎಂದು ಪ್ರತಿಪಾದಿಸಿದ್ದರು.

ವಿವಿಯ ಆವರಣದಲ್ಲಿ ಭಾರತ ವಿರೋಧಿ ಘೋಷಣೆ ಕೂಗಿದ್ದವರು ಕಾಶ್ಮೀರದವರೆಂದೂ ಕೇಜ್ರಿವಾಲ್ ಆರೋಪಿಸಿದ್ದರು.
ಜನಾರ್ದನ ಗೌಡ ಎಂಬ ವಕೀಲರ ದೂರಿನ ಮೇಲೆ ನ್ಯಾಯಾಲಯವೊಂದರ ಆದೇಶದಂತೆ ಹೈದರಾಬಾದ್ ಪೊಲೀಸರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕೇಜ್ರಿವಾಲ್ ಸಹಿತ ಹಲವು ನಾಯಕರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News