×
Ad

ಯಾರಿಗೂ ಬೇಡವಾದ ಮಲ್ಯರ ಕಿಂಗ್‌ಫಿಶರ್ ಮನೆ.. !

Update: 2016-03-17 15:34 IST

ಮುಂಬೈ, ಮಾ.17:ಮದ್ಯದ ದೊರೆ ವಿಜಯ್ ಮಲ್ಯ ಅವರ  ಮನೆಯನ್ನು ಖರೀದಿಸಲು ಯಾರು ಮುಂದೆ ಬಂದಿಲ್ಲ.  ಮುಂಬೈನ ಅಂಧೇರಿಯಲ್ಲಿರುವ ಕಿಂಗ್ ಫಿಶರ‍್  ಹೌಸ್ ನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ   ಗುರುವಾರ ಇ- ಹರಾಜಿಗಿಟ್ಟಿದ್ದರೂ ಯಾರೂ ಬಿಡ್‌ ಸಲ್ಲಿದಿರುವ ಹಿನ್ನೆಲೆಯಲ್ಲಿ ಬ್ಯಾಂಕ್‌ನ ಪ್ರಯತ್ನ ವಿಫಲಗೊಂಡಿದೆ.
 ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಹದಿನೈದು ದಿನಗಳ ಹಿಂದೆಯೇ  2,401 ಚದರ ಅಡಿ  ವಿಸ್ತೀರ್ಣದ  ಕಿಂಗ್ ಫಿಶರ‍್  ಹೌಸ್ ಮೌಲ್ಯ  150 ಕೋಟಿ ರೂ.  ಮೂಲಬೆಲೆ ಮತ್ತು ಬಿಡ್‌ ಹಣ 5 ಲಕ್ಷ ರೂ. ನಿಗದಿಪಡಿಸಿ ಈ ಸಂಬಂಧ ಸಾರ್ವಜನಿಕ ಪ್ರಕಟಣೆಹೊರಡಿಸಿತ್ತು.
ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮಲ್ಯ ಮನೆಯನ್ನು 2002ರ ಹಣಕಾಸು  ಆಸ್ತಿಗಳ ಪುನರ್‌ ನಿರ್ಮಾಣ ಕಾಯಿದೆ ಪ್ರಕಾರ ಇ- ಹರಾಜಿಗೆ ಇಟ್ಟಿತ್ತು.
.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News