ಇವನೂ ತಂದೆ ! ಸ್ವಂತ ಮಗಳನ್ನೇ ವಂಚಿಸಿ ಆಕೆಯ ನಗ್ನ ಚಿತ್ರಗಳನ್ನು ಪಡೆದ ಭೂಪ
ನ್ಯೂಯಾರ್ಕ್ : ನಲ್ವತ್ತೊಂದು ವರ್ಷದ ವ್ಯಕ್ತಿಯೊಬ್ಬ ತಾನು 16ರ ಯುವಕನೆಂದು ಪರಿಚಯಿಸಿಕೊಂಡು ಅಂತರ್ಜಾಲದಲ್ಲಿ ತನ್ನ ಸ್ವಂತ ಹದಿಹರೆಯದ ಪುತ್ರಿಯೊಂದಿಗೆ ಸರಸ ಸಲ್ಲಾಪ ನಡೆಸಿ ಆಕೆ ತನ್ನ ನಗ್ನ ಚಿತ್ರಗಳನ್ನು ಕಳುಹಿಸುವಂತೆ ಮಾಡಿ ನಂತರ ಆಕೆಯನ್ನು ಬ್ಲ್ಯಾಕ್‌ಮೇಲ್ ಮಾಡಿದ ಅಘಾತಕಾರಿ ಸಂಗತಿಯೊಂದು ಬಹಿರಂಗಗೊಂಡಿದ್ದು ನ್ಯೂಯಾರ್ಕಿನ ಹರ್ಕಿಮಾರ್ ಕೌಂಟಿ ಕೋರ್ಟ್ ಈ ಅಮಾನುಷ ತಂದೆಯನ್ನು ದೋಷಿಯೆಂದು ಗುರುತಿಸಿದ್ದು ಆತನಿಗೆ 250 ವರ್ಷಗಳ ತನಕ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಯಿದೆ. ನ್ಯಾಯಾಲಯ ಆತನ ಶಿಕ್ಷೆಯನ್ನು ಜುಲೈ ತಿಂಗಳಲ್ಲಿ ಘೋಷಿಸಲಿದೆ.
ಆರೋಪಿ ತಾನೊಬ್ಬ 16ರ ಹರೆಯದ ಯುವಕನೆಂದು ಪರಿಚಯಿಸಿಕೊಂಡು ಇನ್ಸ್ಟಾಗ್ರಾಂ, ಎಓಎಲ್‌ಹಾಗೂ ಇನ್ನೊಂದು ಟೆಕ್ಸ್ಟ್ ಮೆಸೇಜಿಂಗ್ ಸರ್ವಿಸ್‌ನಲ್ಲಿ ತನ್ನ ಖಾತೆಯನ್ನು ಸೆಪ್ಟೆಂಬರ್ 2013ರಲ್ಲಿ ತೆರೆದು ತನ್ನ ಮಗಳೊಂದಿಗೆ ಚ್ಯಾಟ್ ಮಾಡಲಾರಂಭಿಸಿ ಕೊನೆಗೊಂದು ದಿನ ಆಕಗೆ ತನ್ನ ನಗ್ನ ಚಿತ್ರಗಳನ್ನು ಕಳುಹಿಸುವಂತೆ ಹೇಳಿದ್ದ. ಮೊದಲು ನಿರಾಕರಿಸಿದ ಯುವತಿ ತಾನು ತನ್ನ ತಂದೆಗೇ ನಗ್ನ ಚಿತ್ರಗಳನ್ನು ಕಳುಹಿಸುತ್ತಿರುವುದರ ಬಗ್ಗೆ ಅರಿವಿಲ್ಲದೆಚಿತ್ರಗಳನ್ನು ಕಳುಹಿಸಲು ಆರಂಭಿಸಿದ್ದಳು.
ಕೊನೆಗೆ ಆತ ಕೇವಲ ಸೆಕ್ಸ್ ಬಗ್ಗೆ ಮಾತನಾಡಲು ಇಚ್ಛುಕನಾಗಿದ್ದಾನೆಂದು ತಿಳಿದ ಆಕೆ ನವೆಂಬರ್ ಹೊತ್ತಿಗಾಗಿಈ ಸಂಬಂಧ ಕಡಿದುಕೊಂಡಿದ್ದಳು. ಇದರ ನಂತರ ಹುಡುಗಿಗೆ ತನ್ನ ಪ್ರಿಯಕರನ ತಾಯಿಯದ್ದೆಂದು ಹೇಳಲಾದ ಮೆಸೇಜ್ ಒಂದು ಬಂದು ಆಕೆ ಸಂಬಂಧ ಕಡಿದುಕೊಂಡಿದ್ದನ್ನು ಸಹಿಸಲಾರದೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿಸಿದ್ದಳು.
ಮಗಳ ಪ್ರಿಯಕರ ತನಗೆ ಆಕೆಯ ನಗ್ನ ಚಿತ್ರಗಳನ್ನು ಕಳುಹಿಸಿದ್ದನೆಂದು ಹುಡುಗಿಯ ತಂದೆ ನಂತರ ಹೇಳಲಾರಂಭಿಸಿದ್ದನು.
ಹುಡುಗಿ ತನ್ನ ಶಾಲಾ ಶಿಕ್ಷಕಿಯಲ್ಲಿ ಇದರ ಬಗ್ಗೆ ತಿಳಿಸಿದಾಗಲಷ್ಟೇ ಘಟನೆ ಬಹಿರಂಗಗೊಂಡಿತ್ತು. ಪೊಲೀಸ್ ತನಿಖೆ ನಡೆಸಲಾಗಿ ಹುಡುಗಿಗೆ ಆಕೆಯ ಪ್ರಿಯಕರನದ್ದೆಂದು ಹೇಳಲಾದ ಸಂದೇಶಗಳು ಮನೆಯೊಳಗಿನಿಂದಲೇ ಬಂದಿತ್ತೆಂದು ತಿಳಿದು ಬಂದು ಕೊನೆಗೆ ಆಕೆಯ ತಂದೆಯೇ ವಂಚಕನೆಂದು ಬಹಿರಂಗಗೊಂಡಿತ್ತು.