ದಿಲ್ಲಿ: ಬಾಂಬ್ ಬೆದರಿಕೆ ಕರೆ; ಎರಡು ವಿಮಾನಗಳಲ್ಲಿ ಶೋಧ
Update: 2016-03-17 23:10 IST
ಹೊಸದಿಲ್ಲಿ, ಮಾ.17: ಇಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿಯಂತ್ರಣ ಕೊಠಡಿಗೆ ಗುರುವಾರ ಬೆಳಿಗ್ಗೆ ಬಾಂಬ್ ಬೆದರಿಕೆ ಕರೆ ಬಂದ ನಂತರ ಯಾನಕ್ಕೆ ಸಜ್ಜಾಗಿದ್ದ ಎರಡು ವಿಮಾನಗಳಲ್ಲಿಯ ಪ್ರಯಾಣಿಕರು ಮತ್ತು ಬ್ಯಾಗೇಜ್‌ಗಳನ್ನು ತೆರವುಗೊಳಿಸಿ ವ್ಯಾಪಕಶೋಧ ಕಾರ್ಯಾಚರಣೆಯನ್ನು ನಡೆಸಲಾಯಿತು.
ರಾಯಲ್ ನೇಪಾಲ್ ಏರ್‌ಲೈನ್ಸ್‌ನ ದಿಲ್ಲಿ-ಕಠ್ಮಂಡು ವಿಮಾನದಲ್ಲಿ 155 ಪ್ರಯಾಣಿಕರು ಮತ್ತು ಒಂಬತ್ತು ಸಿಬ್ಬಂದಿಯಿದ್ದರೆ, ಏರ್ ಇಂಡಿಯಾದ ದಿಲ್ಲಿ-ಭುವನೇಶ್ವರ ವಿಮಾನದಲ್ಲಿ 178 ಪ್ರಯಾಣಿಕರು ಮತ್ತು ಏಳು ಸಿಬ್ಬಂದಿಯಿದ್ದರು.
ತಾನು ‘ಸಿಬಿಐ ಅಧಿಕಾರಿ ’ಅಭಿಷೇಕ್ ಸಿಂಗ್ ಎಂದು ಹೇಳಿಕೊಂಡಿದ್ದ ವ್ಯಕ್ತಿಯೋರ್ವ ಈ ಬೆದರಿಕೆ ಕರೆಯನ್ನು ಮಾಡಿದ್ದ ಎಂದು ಮೂಲಗಳು ತಿಳಿಸಿವೆ.