ಬಿಜೆಪಿ ಶಾಸಕನ ಕ್ರೌರ್ಯ : ಕೊನೆಗೂ ಕಾಲು ಕಳೆದುಕೊಂಡ ' ಶಕ್ತಿಮಾನ್ '
Update: 2016-03-17 23:21 IST
ಡೆಹ್ರಾಡೂನ್, ಮಾ. 17 : ಬಿಜೆಪಿ ಶಾಸಕ ಗಣೇಶ್ ಜೋಷಿಯಿಂದ ತೀವ್ರ ಹಲ್ಲೆಗೊಳಗಾದ ಪೊಲೀಸ್ ಕುದುರೆ ಶಕ್ತಿಮಾನ್ ಕೊನೆಗೂ ತನ್ನ ಕಾಲನ್ನು ಕಳೆದುಕೊಂಡಿದೆ. ಗಾಯಗೊಂಡ ಕಾಲಿಗೆ ರಕ್ತ ಸಂಚಾರ ನಿಂತಿದ್ದರಿಂದ ಅದರ ಕಾಲನ್ನು ತೆಗೆದು ಹಾಕಬೇಕಾಯಿತು ಎಂದು ವೈದ್ಯರು ಹೇಳಿದ್ದಾರೆ. ಕಾಲು ತೆಗೆಯುವ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಎಸ್ ಎಸ್ ಪಿ ದೃಢಪಡಿಸಿದ್ದಾರೆ.