×
Ad

ಚೀನಾದಲ್ಲಿ 42.7 ಲಕ್ಷ ವೆಬ್‌ಸೈಟ್‌ಗಳು

Update: 2016-03-18 19:21 IST

ಬೀಜಿಂಗ್, ಮಾ. 18: ಚೀನಾದಲ್ಲಿರುವ ವೆಬ್‌ಸೈಟ್‌ಗಳ ಸಂಖ್ಯೆ ಕಳೆದ ವರ್ಷದ ಕೊನೆಯ ಹೊತ್ತಿಗೆ 42.7 ಲಕ್ಷಕ್ಕೆ ಏರಿತ್ತು ಎಂದು ಇಂದು ಹೊಸ ಅಂಕಿಅಂಶಗಳು ಹೇಳಿವೆ.

 ಕಳೆದ ವರ್ಷವೊಂದರಲ್ಲೇ ಚೀನಾದಲ್ಲಿ 6.2 ಲಕ್ಷ ವೆಬ್‌ಸೈಟ್‌ಗಳನ್ನು ಆರಂಭಿಸಲಾಗಿತ್ತು. ಇದು 2010-14ರ ಅವಧಿಯಲ್ಲಿ ಆರಂಭಗೊಂಡ ವೆಬ್‌ಸೈಟ್‌ಗಳ ಸಂಖ್ಯೆಗಿಂತ ಹೆಚ್ಚಾಗಿದೆ ಎಂದು ಇಂಟರ್‌ನೆಟ್ ಸೊಸೈಟಿ ಆಫ್ ಚೀನಾ ಬಿಡುಗಡೆ ಮಾಡಿದ ವರದಿಯೊಂದು ತಿಳಿಸಿದೆ.

42.7 ಲಕ್ಷ ವೆಬ್‌ಸೈಟ್‌ಗಳ ಪೈಕಿ 30.2 ಲಕ್ಷ ವೆಬ್‌ಸೈಟ್‌ಗಳನ್ನು ವಿವಿಧ ಕಂಪೆನಿಗಳು ನಡೆಸುತ್ತಿವೆ. ಇದು ಒಂದು ವರ್ಷ ಹಿಂದಿನದಕ್ಕಿಂತ 4.93 ಲಕ್ಷ ಹೆಚ್ಚಾಗಿದೆ.

ಸುಮಾರು 10 ಲಕ್ಷ ವೆಬ್‌ಸೈಟ್‌ಗಳನ್ನು ವ್ಯಕ್ತಿಗಳು ವೈಯಕ್ತಿಕ ನೆಲೆಯಲ್ಲಿ ನಡೆಸುತ್ತಿದ್ದಾರೆ. ಇದು 2014ರಲ್ಲಿದ್ದ 1.1 ಲಕ್ಷಕ್ಕಿಂತ ಭಾರೀ ಹೆಚ್ಚಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News