×
Ad

ಟ್ರಂಪ್ ಸಭೆಯಲ್ಲಿ ನಿಂದನೆಗೊಳಗಾದ ಪತ್ರಕರ್ತನ ಆರೋಪ ವಾಪಸ್

Update: 2016-03-18 19:25 IST

ವಾಶಿಂಗ್ಟನ್, ಮಾ. 18: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಆಕಾಂಕ್ಷಿ ಡೊನಾಲ್ಡ್ ಟ್ರಂಪ್‌ರ ಕಳೆದ ವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರೇಕ್ಷಕರಿಂದ ನಿಂದನೆಗೊಳಗಾದ ಹಾಗೂ ಬಳಿಕ ಪೊಲೀಸರಿಂದ ಬಂಧಿಸಲ್ಪಟ್ಟ ಭಾರತೀಯ ಅಮೆರಿಕನ್ ಪತ್ರಕರ್ತನ ವಿರುದ್ಧದ ಎಲ್ಲ ಆರೋಪಗಳನ್ನು ಕೈಬಿಡಲಾಗಿದೆ.

ಈ ಘಟನೆ ಶಿಕಾಗೊದಲ್ಲಿ ನಡೆದಿತ್ತು. ಆದರೆ, ಅಭೂತಪೂರ್ವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಬಳಿಕ ಈ ಸಭೆಯನ್ನು ರದ್ದುಗೊಳಿಸಲಾಗಿತ್ತು.

ಸಿಬಿಎಸ್ ನ್ಯೂಸ್‌ನ ವರದಿಗಾರ ಸೊಪನ್ ದೇಬ್ ವಿರುದ್ಧದ ಎಲ್ಲ ಆರೋಪಗಳನ್ನು ಕೈಬಿಡಲಾಗಿದೆ ಎಂದು ಶಿಕಾಗೊ ಪೊಲೀಸ್ ಇಲಾಖೆ ಮತ್ತು ಇಲಿನಾಯಿಸ್ ರಾಜ್ಯ ಪೊಲೀಸರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News