ಅಮೆರಿಕನ್ ವಿದ್ಯಾರ್ಥಿ ಬ್ಯಾನರ್ ಕೀಳುವ ವೀಡಿಯೊ ಬಿಡುಗಡೆ
Update: 2016-03-18 19:33 IST
ಸಿಯೋಲ್, ಮಾ. 18: ಅಮೆರಿಕದ ವಿದ್ಯಾರ್ಥಿ ಒಟ್ಟೊ ವಾಂರ್ಬಿಯರ್ ಹೊಟೇಲೊಂದರ ಗೋಡೆಯಲ್ಲಿದ್ದ ರಾಜಕೀಯ ಬ್ಯಾನರನ್ನು ತೆಗೆಯುವ ಸಿಸಿಟಿವಿ ಚಿತ್ರಗಳನ್ನು ಉತ್ತರ ಕೊರಿಯ ಬಿಡುಗಡೆ ಮಾಡಿದೆ. ಈ ‘ಅಪರಾಧ’ಕ್ಕಾಗಿ ಆತನಿಗೆ 15 ವರ್ಷಗಳ ಕಠಿಣ ಶಿಕ್ಷೆಯನ್ನು ನೀಡಲಾಗಿದೆ.
ಪ್ಯಾಂಗ್‌ಯಾಂಗ್‌ನಲ್ಲಿರುವ ಯಾಂಗಾಕ್ಡೊ ಅಂತಾರಾಷ್ಟ್ರೀಯ ಹೊಟೇಲ್‌ನಲ್ಲಿನ ‘ಸಿಬ್ಬಂದಿಗೆ ಮೀಸಲಾದ ಸ್ಥಳ’ದಿಂದ ತೆಗೆಯಲಾದ ಈ ಕಿರು ಸಿಸಿಟಿವಿ ದೃಶ್ಯಾವಳಿಯನ್ನು ಬುಧವಾರ ನಡೆದ ವಾಂರ್ಬಿಯರ್‌ನ ವಿಚಾರಣೆ ವೇಳೆ ಪ್ರಮುಖ ಸಾಕ್ಷವಾಗಿ ಸಲ್ಲಿಸಲಾಗಿತ್ತು.
ಉತ್ತರ ಕೊರಿಯವು ವಾಂರ್ಬಿಯರ್‌ರನ್ನು ರಾಜಕೀಯ ದಾಳವಾಗಿ ಬಳಸುತ್ತಿದೆ ಎಂದು ಅಮೆರಿಕ ಆರೋಪಿಸಿದೆ ಹಾಗೂ ಅಸಭ್ಯ ವರ್ತನೆಗಾಗಿ ನೀಡಿದ ಈ ಶಿಕ್ಷೆಯು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರದಂತಾಗಿದೆ ಎಂದು ಹೇಳಿದೆ.