ಬ್ರೆಝಿಲ್: ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು
Update: 2016-03-18 23:19 IST
ರಿಯೋ ಡಿ ಜನೈರೊ, ಮಾ. 18: ಬ್ರೆಝಿಲ್ ಅಧ್ಯಕ್ಷೆ ಡಿಲ್ಮಾ ರೌಸಿಫ್ ವಿರುದ್ಧ ರಿಯೋ ಡಿ ಜನೈರೊದಲ್ಲಿ ಗುರುವಾರ ಪ್ರತಿಭಟನೆ ನಡೆಸುತ್ತಿದ್ದ ಉದ್ರಿಕ್ತ ಜನರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳು ಮತ್ತು ಸ್ಟನ್ ಗ್ರೆನೇಡ್‌ಗಳನ್ನು ಸಿಡಿಸಿದರು.
ಭ್ರಷ್ಟಾಚಾರ ಹಗರಣಗಳಲ್ಲಿ ಸಿಲುಕಿರುವ ಅಧ್ಯಕ್ಷೆ ರಾಜೀನಾಮೆ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ.
ರಾಜಧಾನಿ ಬ್ರೆಸೀಲಿಯದಲ್ಲಿರುವ ಅಧ್ಯಕ್ಷೀಯ ಅರಮನೆಯ ಎದುರು ಭಾಗದಲ್ಲಿ ಸಾವಿರಾರು ಜನರು ನೆರೆದು ಡಿಲ್ಮಾ ರಾಜೀನಾಮೆಗಾಗಿ ಒತ್ತಾಯಿಸಿದರು.
ಅರಮನೆಯ ಸಮೀಪ ಜನರು ಬರದಂತೆ ನೋಡಿಕೊಳ್ಳಲು ಪೊಲೀಸರು ಅಶ್ರುವಾಯು ಶೆಲ್‌ಗಳು ಮತ್ತು ಸ್ಟನ್ ಗ್ರೆನೇಡ್‌ಗಳನ್ನು ಸಿಡಿಸಿದರು.
ದೇಶದ ಆರ್ಥಿಕ ರಾಜಧಾನಿ ಸಾವೊ ಪೌಲೊದಲ್ಲೂ ಸಾವಿರಾರು ಜನರು ಪ್ರತಿಭಟನೆ ನಡೆಸಿ ಅಧ್ಯಕ್ಷೆಯ ರಾಜೀನಾಮೆಗಾಗಿ ಒತ್ತಾಯಿಸಿದರು.