ಆತ್ಮಹತ್ಯಾ ದಾಳಿ: 4 ಬಲಿ

Update: 2016-03-19 18:18 GMT

ಇಸ್ತಾಂಬುಲ್, ಮಾ. 19: ಇಸ್ತಾಂಬುಲ್‌ನಲ್ಲಿರುವ ಪ್ರಮುಖ ರಸ್ತೆಯೊಂದರಲ್ಲಿ ಶನಿವಾರ ನಡೆದ ಆತ್ಮಹತ್ಯಾ ದಾಳಿಯಲ್ಲಿ ಬಾಂಬರ್ ಸೇರಿದಂತೆ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ ಹಾಗೂ 20 ಮಂದಿ ಗಾಯಗೊಂಡಿದ್ದಾರೆ ಎಂದು ಸಿಎನ್‌ಎನ್-ಟರ್ಕ್ ಟೆಲಿವಿಷನ್ ವರದಿ ಮಾಡಿದೆ.
ಜನರು ಖರೀದಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಇಸ್ತಿಕ್ಕಲ್ ಕ್ಯಾಡೆಸಿ ರಸ್ತೆಯಲ್ಲಿ ಭಯೋತ್ಪಾದಕ ದಾಳಿ ನಡೆದಿದೆ.
ರಾಜಧಾನಿ ಅಂಕಾರದಲ್ಲಿ 35 ಜನರನ್ನು ಬಲಿತೆಗೆದುಕೊಂಡ ಆತ್ಮಹತ್ಯಾ ಕಾರ್ ಬಾಂಬ್ ದಾಳಿ ನಡೆದ ಆರು ದಿನಗಳ ಬಳಿಕ ಇಸ್ತಾಂಬುಲ್‌ನಲ್ಲಿ ಈ ದಾಳಿ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News