×
Ad

ಅಖ್ಲಾಕ್ ಹತ್ಯೆ ಮರೆಯೋ ಮೊದಲು, ಮತ್ತೊಂದು ಕ್ರೂರ ಹತ್ಯೆ ನಡೆದೇ ಹೋಯಿತು...

Update: 2016-03-20 17:49 IST

ಒಂದಿಷ್ಟು ಮಾಂಸ ಮನೆಯ ಫ್ರಿಜ್ ನಲ್ಲಿದ್ದ ಕಾರಣಕ್ಕೆ ಪಕ್ಕದ ದೇವಸ್ಥಾನದಿಂದ ಕರೆ ನೀಡಿ ಅಖ್ಲಾಕ್ ಎಂಬ ವ್ಯಕ್ತಿಯನ್ನು ಚಿತ್ರ ಹಿಂಸೆ ನೀಡಿ ಸಾಯಿಸಿದ ಹೇಯ ಕೃತ್ಯವನ್ನು ದೇಶ ಮರೆಯುವ ಮೊದಲೇ ಜಾರ್ಖಂಡ್ ನಲ್ಲಿ ಮಾಂಸ ವ್ಯಾಪಾರ ಮಾಡುವ ಇಬ್ಬರನ್ನು ಮರದಲ್ಲಿ ತೂಗು ಹಾಕಿ ಕ್ರೂರ ರೀತಿಯಲ್ಲಿ ಹತ್ಯೆ ಮಾಡಲಾಗಿದೆ. ದೇಶವು ಅಸಹಿಷ್ಣುತೆಯ ಬೇಗೆಯಲ್ಲಿ ಬೆಂದು ಹೋಗುತ್ತಿದ್ದು, ಅದರ ವಿರುದ್ಧ ಮಾತೆತ್ತುವ ಸ್ವಾತಂತ್ರ್ಯವನ್ನೂ ಕಸಿದು ಕೊಂಡು, ಮತ್ತೂ ಮತ್ತೂ ಹಿಂಸೆ ತಾಂಡವವಾಡಲು ಸರಕಾರಗಳು ಬೆಂಬಲ ನೀಡುತ್ತದೆ.

ಅಸಹಿಷ್ಣುತೆ ಮೇಲೈಸುತ್ತಿರುವ ಮಣ್ಣಿನಲ್ಲಿ ಅಖ್ಲಾಕ್ ರ ಹತ್ಯೆ ನಡೆದಿದ್ದು ಅದರ ಭಾಗ ಎಂದು ಹೇಳಿದ್ದೇ ತಪ್ಪೆನ್ನುವಂತೆ ದೇಶಾದ್ಯಂತ ಗುಲ್ಲೆಬ್ಬಿಸಿದ ಅದೇ ಜನ ಇಂದು ಅಸಹಿಷ್ಣುತೆ ಯ ಮುಂದಿನ ಭಾಗವೆಂಬಂತೆ ಇಬ್ಬರು ಅಮಾಯಕ ಮುಸ್ಲಿಮರನ್ನು ಕ್ರೂರ ರೀತಿಯಲ್ಲಿ ಕೊಂದು ಹಾಕಿದ್ದಾರೆ. ತಮ್ಮ ಜೀವನೋಪಾಯಕ್ಕಾಗಿ ಮಾಂಸದ ವ್ಯಾಪಾರ ಮಾಡುವುದು ತಪ್ಪು ಎನ್ನುವುದಾದರೆ, ಅದೆಷ್ಟೋ ಕೋಟಿ ಲಾಭ ತಂದು ಕೊಡುವ ಬೀಫನ್ನು ರಫ್ತು ಮಾಡುವ ಸರಕಾರವನ್ನು ಇವರು ಏನೂ ಮಾಡಿಲ್ಲ.

ಮಾಂಸವಾಗಲಿ, ಮಾಂಸದ ವ್ಯಾಪಾರವಾಗಲಿ ಸಂಘಪರಿವಾರದ ಗುರಿಯಲ್ಲ, ಬದಲಾಗಿ ಮುಸ್ಲಿಂ ಎಂಬ ಪದವೇ ಇವರ ಗುರಿಯಾಗಿದೆ. ದೇಶದಲ್ಲಿ ಅದೆಷ್ಟೋ ಮಾಂಸದ ದೊಡ್ಡ ವ್ಯಾಪಾರಿಗಳು ಹಿಂದೂಗಳೇ ಆಗಿದ್ದು, ಇದುವರೆಗೂ ಅವರ ಮೇಲೆ ಸಂಘಪರಿವಾರ ಧಾಳಿ ನಡೆಸಿದ ಉದಾಹರಣೆಗಳೇ ಇಲ್ಲ, ಸಂಘಪರಿವಾರದ ಧಾಳಿಗಳೆಲ್ಲವೂ ಮುಸ್ಲಿಂ ವ್ಯಾಪಾರಸ್ಥರ ಮೇಲೆ. ಇಲ್ಲಿ ನಮಗೆ ಸ್ಪಷ್ಟವಾಗುವುದೆಂದರೆ ಸಂಘದ ಉದ್ದೇಶ ಮುಸ್ಲಿಂ ಹತ್ಯಾಕಾಂಡವೇ ಆಗಿದೆ. ಇನ್ನೂ ಅದೆಷ್ಟು ಅಮಾಯಕರು ಸಂಘಪರಿವಾರದ ಭಯೋತ್ಪಾದಕರ ಕ್ರೂರ ಕೈಗಳಿಗೆ ಬಲಿಯಾಗಲಿರುವರೋ ಅರಿಯದು. ಸರಕಾರವಂತೂ ಮೌನಿಯಾಗಿದೆ.

Writer - -ಷಾ ಕುದ್ರಡ್ಕ

contributor

Editor - -ಷಾ ಕುದ್ರಡ್ಕ

contributor

Similar News