×
Ad

ಸಿಂಧ್: ಹೋಳಿ ಹಬ್ಬಕ್ಕೆ ಸರಕಾರಿ ರಜೆ

Update: 2016-03-20 23:30 IST

ಒಂಕ್ರಿ, ಮಾ.20: ಪಾಕಿಸ್ತಾನದ ಸಿಂಧ್ ಪ್ರಾಂತ್ಯವು ಹಿಂದೂಗಳು ಆಚರಿಸುವ ಹೋಳಿ ಹಬ್ಬದ ನಿಮಿತ್ತ ಮಾರ್ಚ್24ನ್ನು ಸಾರ್ವಜನಿಕ ರಜಾದಿನವೆಂದು ಘೋಷಿಸಿದೆ. ಶನಿವಾರ ಸಿಂಧ್ ಪ್ರಾಂತ್ಯ ಸರಕಾರವು ಈ ಬಗ್ಗೆ ಅಧಿಕೃತ ಪ್ರಕಟಣೆಯನ್ನು ಹೊರಡಿಸಿರುವುದಾಗಿ ಮಾಧ್ಯಮಗಳು ಶನಿವಾರ ವರದಿ ಮಾಡಿವೆ.
  ಪಾಕಿಸ್ತಾನದಲ್ಲಿ ಹೋಳಿ ಹಬ್ಬವನ್ನು ಸಾರ್ವಜನಿಕ ರಜಾದಿನವಾಗಿ ಘೋಷಿಸಿರುವುದು ಇದು ಪ್ರಥಮ ಸಲವಾಗಿದೆಯೆಂದು ಅದು ಹೇಳಿದೆ. ಹೋಳಿ, ದೀಪಾವಳಿ ಹಾಗೂ ಈಸ್ಟರ್ ಹಬ್ಬವನ್ನು ಅಲ್ಪಸಂಖ್ಯಾತರ ಸಾರ್ವಜನಿಕ ರಜಾದಿನವೆಂದು ಘೋಷಿಸುವ ನಿರ್ಣಯವೊಂದನ್ನು ಪಾಕ್ ರಾಷ್ಟ್ರೀಯ ಅಸೆಂಬ್ಲಿಯು ನಿರ್ಣಯವನ್ನು ಅಂಗೀಕರಿಸಿರುವ ಹಿನ್ನೆಲೆಯಲ್ಲಿ ಸಿಂಧ್ ಸರಕಾರ ಈ ಕ್ರಮಕ್ಕೆ ಮುಂದಾಗಿದೆ.
ಪಿಎಂಎಲ್‌ಎನ್ ಪಕ್ಷದ ಸಂಸದ ರಮೇಶ್ ಕುಮಾರ್ ವಂಗ್ವಾನಿ, ಇತ್ತೀಚೆಗೆ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಂಡಿಸಿದ ನಿರ್ಣಯದಲ್ಲಿ ಹೋಳಿ, ದೀಪಾವಳಿ ಹಾಗೂ ಈಸ್ಟರ್ ಹಬ್ಬಗಳನ್ನು ಸಾರ್ವಜನಿಕ ರಜಾದಿನಗಳೆಂದು ಘೋಷಿಸಬೇಕೆಂದು ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News