ಆಸ್ಟ್ರೇಲಿಯಾಕ್ಕೆ ಶಂಕಿತ ಎಂಎಚ್ 370 ವಿಮಾನದ ಅವಶೇಷಗಳ ರವಾನೆ
Update: 2016-03-20 23:31 IST
ಕೌಲಾಲಂಪುರ,ಮಾ.20: ಮೊಝಾಂಬಿಕ್ ಕರಾವಳಿಯಲ್ಲಿ ಪತ್ತೆಯಾದ ವಿಮಾನದಅವಶೇಷಗಳು ಎರಡು ವರ್ಷಗಳ ಹಿಂದೆ ಕಣ್ಮರೆಯಾದ ಮಲೇಶ್ಯನ್ ಏರ್‌ಲೈನ್ಸ್‌ನ 370 ವಿಮಾನದ್ದೆಂದು ಶಂಕಿಸಲಾಗಿದ್ದು, ಅದನ್ನು ತಜ್ಞರ ಪರಿಶೀಲನೆಗಾಗಿ ರವಿವಾರ ಆಸ್ಟ್ರೇಲಿಯಾಕ್ಕೆ ತರಲಾಗಿದೆ.
239 ಮಂದಿ ಪ್ರಯಾಣಿಸುತ್ತಿದ್ದ ಬೋಯಿಂಗ್ 777 ಮಾದರಿಯ ವಿಮಾನವು 2014ರ ಮಾರ್ಚ್ 8ರಂದು ನಿಗೂಢವಾಗಿ ಕಣ್ಮರೆಯಾಗಿತ್ತು. ಇತ್ತೀಚೆಗೆ ದಕ್ಷಿಣ ಆಫ್ರಿಕದ ಬಾಲಕ ಹಾಗೂ ಓರ್ವ ಅಮೆರಿಕನ್ ನ್ಯಾಯವಾದಿ ಮೊಝಾಂಬಿಕ್ ಕರಾವಳಿಯ ಎರಡು ವಿಭಿನ್ನ ಪ್ರದೇಶಗಳಲ್ಲಿ ವಿಮಾನದ ಅವಶೇಷಗಳ ಎರಡು ತುಂಡುಗಳನ್ನು ಪತ್ತೆಹಚ್ಚಿದ್ದರು.