ಮುರ್ಸಿ ಬಂಧಮುಕ್ತಿಗೆ ಮಧ್ಯಪ್ರವೇಶಿಸಲು ವಿಶ್ವಸಂಸ್ಥೆಗೆ ಮಾಜಿ ಸಂಸದರ ಆಗ್ರಹ
ಕೈರೋ, ಮಾ.20: ಮುಸ್ಲಿಂ ಬ್ರದರ್‌ಹುಡ್‌ನ ನಾಯಕ ಮುಹಮ್ಮದ್ ಮುರ್ಸಿಯನ್ನು ಈಜಿಪ್ಟ್‌ನ ಸೇನಾಡಳಿತ ಅಕ್ರಮ ವಾಗಿ ಬಂಧನದಲ್ಲಿರಿಸಿದ್ದು,ಅವರ ಬಿಡುಗಡೆಗೆ ವಿಶ್ವಸಂಸ್ಥೆಯು ಮಧ್ಯಪ್ರವೇಶಿಸಬೇಕೆಂದು ದೇಶದ ಮಾಜಿ ಸಂಸದರು ಆಗ್ರಹಿಸಿದ್ದಾರೆ. ಪ್ರಜಾತಾಂತ್ರಿಕವಾಗಿ ಅಧಿಕಾರಕ್ಕೇರಿದ ಮುರ್ಸಿಯವರನ್ನು ಸೇನಾಡಳಿತ ಬಂಧನದಲಿಟ್ಟು ಚಿತ್ರಹಿಂಸೆ ನೀಡುತ್ತಿದೆಯೆಂದವರು ಆಪಾದಿಸಿದ್ದಾರೆ. ಅವರಿಗೆ ಕಾರಾಗೃಹದಲ್ಲಿ ನೀಡಲಾಗುತ್ತಿರುವ ಆಹಾರದಲ್ಲಿ ವಿಷವನ್ನು ಸೇರಿಸಲಾಗುತ್ತಿದೆಯೆಂಬ ವರದಿಗಳು ಬಂದಿರುವ ಹಿನ್ನೆಲೆಯಲ್ಲಿ ಅವರನ್ನು ತಜ್ಞ ವೈದ್ಯರಿಂದ ದೈಹಿಕ ಪರಿಶೀಲನೆಗೊಳಪಡಿಸಬೇಕು. ಮುರ್ಸಿಯ ಜೀವ ಅಪಾಯದಲ್ಲಿದ್ದು, ಅವರನ್ನು ನ್ಯಾಯವಾದಿಗಳ ಜೊತೆ ಮಾಧ್ಯಮಗಳ ಮುಂದೆ ಹಾಜರುಪಡಿಸಬೇಕೆಂದು ಮಾಜಿ ಸಂಸದರು ಆಗ್ರಹಿಸಿದ್ದಾರೆ. ಸಾಮೂಹಿಕ ಜೈಲ್ ಬ್ರೇಕ್ ಪ್ರಕರಣಕ್ಕೆ ಸಂಬಂಧಿಸಿ ಈಜಿಪ್ಟ್‌ನ ಸೇನಾ ನ್ಯಾಯಾಲಯವು ಮುರ್ಸಿಗೆ ಅಜೀವ ಕಾರಾಗೃಹ ಶಿಕ್ಷೆಯನ್ನು ಘೋಷಿಸಿತ್ತು. 2011ರಲ್ಲಿ ಮುರ್ಸಿ ಅವ ರು ವಾಡ್ರಿ ನಾರ್ತೂನ್ ಕಾರಾಗೃಹದಿಂದ ಪರಾರಿಯಾಗಿದ್ದರು. ವಿದೇಶಿ ಉಗ್ರರ ಜೊತೆ ಶಾಮೀಲಾಗಿ ಇತರ ಇಸ್ಲಾಮಿಕ್ ಹೋರಾಟಗಾರರನ್ನು ಜೈಲಿನಿಂದ ಬಿಡುಗಡೆಗೊಳಿಸಲು ಸಂಚುಹೂಡಿದ ಆರೋಪವನ್ನು ಅವರ ವಿರುದ್ಧ ಹೊರಿಸಲಾಗಿತ್ತು.