ರಶ್ಯದ ಕಮ್ಚಟ್ಕ ಪರ್ಯಾಯ ದ್ವೀಪದಲ್ಲಿ ಭೂಕಂಪ
Update: 2016-03-21 23:43 IST
ವಾಶಿಂಗ್ಟನ್, ಮಾ. 21: ರಶ್ಯದ ಕಮ್ಚಟ್ಕ ಪರ್ಯಾಯ ದ್ವೀಪದ ಪೂರ್ವ ಕರಾವಳಿ ಸಮುದ್ರದಲ್ಲಿ ಇಂದು ರಿಕ್ಟರ್ ಮಾಪಕದಲ್ಲಿ 6.6ರ ತೀವ್ರತೆಯ ಭೂಕಂಪ ಸಂಭವಿಸಿದೆ. ಆದಾಗ್ಯೂ, ಸೊತ್ತು ಮತ್ತು ಪ್ರಾಣ ಹಾನಿ ಉಂಟಾದ ಬಗ್ಗೆ ಯಾವುದೇ ವರದಿಗಳು ಬಂದಿಲ್ಲ ಎಂದು ಅಮೆರಿಕದ ಪರಿಣತರು ಹೇಳಿದ್ದಾರೆ.
ಸಮುದ್ರದಲ್ಲಿ 29 ಕಿಲೋಮೀಟರ್ ಆಳದಲ್ಲಿ ಸ್ಥಳೀಯ ಸಮಯ ಮುಂಜಾನೆ 3.50ಕ್ಕೆ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರ ಬಿಂದು ಕಮ್ಚಟಸ್ಕ್ ಸ್ಟಾರಿಯ ಉಸ್ಟ್‌ನಿಂದ ಸಮುದ್ರದಲ್ಲಿ 206 ಕಿಲೋಮೀಟರ್ ದೂರದಲ್ಲಿತ್ತು ಎಂದು ಯುಎಸ್ ಜಿಯಾಲಜಿಕಲ್ ಸರ್ವೇ ಹೇಳಿದೆ.