×
Ad

ಪಕ್ಷದ ಮುಖ್ಯಸ್ಥೆಯ ನೆಲೆಯಲ್ಲೇ ಸರಕಾರ ನಡೆಸುವ ಸೂಕಿ

Update: 2016-03-21 23:46 IST

ನೇಪ್ಯಿಟೊ, ಮಾ. 21: ಮ್ಯಾನ್ಮಾರ್‌ನಲ್ಲಿ ಅಧಿಕಾರಕ್ಕೆ ಬರಲಿರುವ ನ್ಯಾಶನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ಪಕ್ಷದ ಸರಕಾರವನ್ನು ಆಂಗ್ ಸಾನ್ ಸೂ ಕಿ ಪಕ್ಷದ ಮುಖ್ಯಸ್ಥೆಯ ನೆಲೆಯಲ್ಲೇ ಮುನ್ನಡೆಸಲಿದ್ದಾರೆ ಹಾಗೂ ಅವರು ಸರಕಾರದಲ್ಲಿ ಅಧಿಕೃತ ಹುದ್ದೆಯೊಂದನ್ನು ವಹಿಸಿಕೊಳ್ಳುವ ಸಾಧ್ಯತೆ ವಿರಳ ಎಂದು ಪಕ್ಷ ರವಿವಾರ ಹೇಳಿದೆ.
ಮ್ಯಾನ್ಮಾರ್ ಸಂಸತ್ತು ಕಳೆದ ವಾರ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಸೂ ಕಿಯ ನಿಕಟವರ್ತಿ ಹಟಿನ್ ಕ್ಯಾವ್‌ರನ್ನು ನೂತನ ಅಧ್ಯಕ್ಷರನ್ನಾಗಿ ಆರಿಸಿತ್ತು. ಅವರು 1960ರ ದಶಕದ ಬಳಿಕ ಅಧಿಕಾರಕ್ಕೆ ಬಂದ ಸೇನಾ ಹಿನ್ನೆಲೆಯಿಲ್ಲದ ಪ್ರಥಮ ಅಧ್ಯಕ್ಷರಾಗಿದ್ದಾರೆ.
ಕಳೆದ ವರ್ಷದ ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಎನ್‌ಎಲ್‌ಡಿ ಭಾರೀ ಬಹುಮತದಿಂದ ಅಧಿಕಾರಕ್ಕೆ ಬಂದಿದೆ. ಆದರೆ, ಈ ಹಿಂದಿನ ಸೇನಾ ಸರಕಾರವು ಸಂವಿಧಾನಕ್ಕೆ ತಿದ್ದುಪಡಿ ತಂದು ಸೂ ಕಿ ದೇಶದ ಅಧ್ಯಕ್ಷರಾಗುವುದನ್ನು ನಿರ್ಬಂಧಿಸಿದೆ. ಸೂ ಕಿಯ ಇಬ್ಬರು ಮಕ್ಕಳು ಮತ್ತು ದಿವಂಗತ ಪತಿ ಮ್ಯಾನ್ಮಾರ್‌ನ ಪೌರತ್ವವನ್ನು ಹೊಂದಿಲ್ಲದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸೇನಾ ಸರಕಾರ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News