×
Ad

ವೈದ್ಯ ಲೋಕಕ್ಕೆ ಸವಾಲಾದ ಮಹಿಳೆಯ ತಲೆಮೇಲಿನ ಕೊಂಬು!

Update: 2016-03-22 21:49 IST

ಚಾಮರಾಜನಗರ, ಮಾ. 22: ಜಿಲ್ಲೆಯಲ್ಲಿ ಮಹಿಳೆಯೊಬ್ಬರ ತಲೆಯಲ್ಲಿ ಕೊಂಬು ಕಂಡುಬಂದಿದ್ದು, ವೈದ್ಯ ಲೋಕಕ್ಕೆ ಸವಾಲಾಗಿದೆ. ಇದು ವಿಚಿತ್ರವಾದರೂ ನಂಬಲೇ ಬೇಕಾದ ಸಂಗತಿ. ಚಾಮರಾಜನಗರ ತಾಲೂಕಿನ ಪುಣಜನೂರು ಗ್ರಾಮ ಪಂಚಾಯತ್‌ಗೆ ಸೇರಿದ ಹೊಸಪೋಡು ಕಾಲನಿಯಲ್ಲಿ ವಾಸ ಮಾಡುತ್ತಿರುವ ಸೋಲಿಗ ಮಾದಮ್ಮ ಎಂಬವರ ತಲೆಯಲ್ಲಿ ಆಡಿಗೆ ಬರುವ ಹಾಗೆ ಕೊಂಬು ಬರುತ್ತಿದ್ದು, ಅಚ್ಚರಿ ಮೂಡಿಸಿದೆ.

ಮಾದಮ್ಮರ ತಲೆಯಲ್ಲಿ ಕಳೆದ ಐದಾರು ವರ್ಷಗಳಿಂದ ಕೊಂಬು ಬೆಳೆದು ತುಂಡಾಗಿ ಬಿದ್ದು, ಮತ್ತೆ ಕೊಂಬು ಬೆಳೆಯುತ್ತಿದೆ. ಮಾದಮ್ಮ ಮೂಲತಃ ಬೇಡಗುಳಿ ನಿವಾಸಿಯಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಬೇಡಗುಳಿಯಿಂದ ಹೊಸಪೋಡಿಗೆ ಬಂದು ಸಂಸಾರ ಸಾಗಿಸುತ್ತಿರುವ ಮಾದಮ್ಮರಿಗೆ ತಲೆಯಲ್ಲಿ ಮೂಡಿದ ಕೊಂಬಿನದೇ ಚಿಂತೆ. ತಲೆಯಲ್ಲಿ ಕೊಂಬು ಇರುವ ತನಕ ವಿಪರೀತ ತಲೆ ನೋವು ಬಂದು ಜೀವನವೇ ಬೇಡ ಎನಿಸುವ ಸ್ಥಿತಿಗೆ ಬಂದಿದ್ದಾರೆ.

ತುಂಬು ಕುಟುಂಬದಲ್ಲಿರುವ ಮಾದಮ್ಮ ತಲೆಯಲ್ಲಿನ ಕೊಂಬಿನ ಚಿಂತೆಯಲ್ಲೇ ದಿನದೂಡುತ್ತಿದ್ದಾರೆ. ಕಳೆದ ಐದಾರು ವರ್ಷಗಳಿಂದ ಆರೇಳು ತಿಂಗಳಿಗೊಮ್ಮೆ ಬೆಳೆಯುವ ಈ ಕೊಂಬಿನ ಹಿಂದಿನ ರಹಸ್ಯ ಮಾತ್ರ ನಿಗೂಢವಾಗಿದೆ. ತಲೆಯಲ್ಲಿ ಮೂಡಿ ಬಂದಿರುವ ಕೊಂಬಿನಿಂದ ನರಕಯಾತನೆ ಅನುಭವಿಸುತ್ತಿರುವ ಸೋಲಿಗ ಮಹಿಳೆ ಮಾದಮ್ಮರ ನೆರವಿಗೆ ಜಿಲ್ಲಾಡಳಿತ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮುಂದಾಗುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Writer - - ನಾ. ಅಶ್ವಥ್ ಕುಮಾರ್

contributor

Editor - - ನಾ. ಅಶ್ವಥ್ ಕುಮಾರ್

contributor

Similar News