×
Ad

ಕೆನಡಾ ಅಂಗಡಿಗಳಲ್ಲಿ ಇಸ್ರೇಲ್ ಉತ್ಪನ್ನ ಬಹಿಷ್ಕರಿಸಲು ಕರೆ ನೀಡುವ ಸ್ಟಿಕ್ಕರ್‌ಗಳು

Update: 2016-03-23 09:09 IST

ಒಟ್ಟಾವ, ಮಾ.23: ಇಸ್ರೇಲ್ ಉತ್ಪನ್ನಗಳನ್ನು ಬಹಿಷ್ಕರಿಸಿ ಎಂದು ಕರೆ ನೀಡುವ ಸ್ಟಿಕ್ಕರ್‌ಗಳು ಕೆನಡಾದ ಎಲ್ಲೆಡೆ ರಾರಾಜಿಸುತ್ತಿವೆ. ಮಾನವ ಹಕ್ಕುಗಳ ಸಂರಕ್ಷಣೆ ಕೂಗಿಗೆ ಹೀಗೂ ಬೆಂಬಲ ನೀಡಬಹುದು ಎಂದು ಕಂಡುಕೊಂಡ ನೂತನ ವಿಧಾನ ಇದು!


ಹೇಗೆ ಎನ್ನುತ್ತೀರಾ? ಇಸ್ರೇಲ್‌ನಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇಶಕ್ಕೆ ಎಚ್ಚರಿಕೆ ಸಂದೇಶ ರವಾನಿಸುವ ಪ್ರಯತ್ನ ಇದು. ಜತೆಗೆ ಮಧ್ಯಪ್ರಾಚ್ಯ ದೇಶಗಳಲ್ಲಿ ಶಾಶ್ವತ ಶಾಂತಿ ನೆಲೆಸುವಂತಾಗಲು ಈ ವಿಶಿಷ್ಟ ಆಂದೋಲನ. ಇಸ್ರೇಲ್‌ನಿಂದ ಆಮದಾದ ಎಲ್ಲಾ ಉತ್ಪನ್ನಗಳ ಮೇಲೆ ಕಡುಕಿತ್ತಳೆ ಬಣ್ಣದ ಇಂಥ ಸ್ಟಿಕ್ಕರ್‌ಗಳನ್ನು ಹಚ್ಚಲಾಗಿದೆ.


ಆ ಎಚ್ಚರಿಕೆ ಸ್ಟಿಕ್ಕರ್‌ನ ಒಕ್ಕಣೆ ಹೀಗಿದೆ ನೋಡಿ: "ಎಚ್ಚರಿಕೆ! ಈ ಉತ್ಪನ್ನ ಖರೀದಿಸಬೇಡಿ. ಇದು ಇಸ್ರೇಲಿ ಉತ್ಪನ್ನ. ಅಂತರರಾಷ್ಟ್ರೀಯ ಕಾನೂನು, 4ನೇ ಜಿನಿವಾ ಒಪ್ಪಂದ ಹಾಗೂ ಮೂಲಭೂತ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ ದೇಶದಲ್ಲಿ ತಯಾರಾದದ್ದು--- ಬಿಡಿಎಸ್"

ಇಸ್ರೇಲ್ ವಿರುದ್ಧ ಅದರ ಕ್ರಮವನ್ನು ಖಂಡಿಸುವ, ನಿಷೇಧ ಹೇರುವ ಹಾಗೂ ಬಂಡವಾಳ ಹಿಂತೆಗೆದುಕೊಂಡು ಆರ್ಥಿಕ ದಿಗ್ಬಂಧನ ವಿಧಿಸುವ ಪರವಾಗಿ ಮತಹಾಕಿದ ಕೆನಡಾ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿ ಕೆನಡಿಯನ್ಸ್ ಫಾರ್ ಜೆಸ್ಟೀಸ್ ಅಂಡ್ ಪೀಸ್ ಇನ್ ದ ಮಿಡ್ಲ್ ಈಸ್ಟ್" ಸಂಘಟನೆ ಈ ಸ್ಟಿಕ್ಕರ್‌ಗಳನ್ನು ಮುದ್ರಿಸಿ ದೇಶಾದ್ಯಂತ ಎಲ್ಲ ಅಂಗಡಿಗಳಲ್ಲಿ ಹಚ್ಚುವಂತೆ ಮನವೊಲಿಸಿದೆ.

ಸಂಘಟನೆಯ ಈ ಪ್ರಯತ್ನ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿರುವ ಬಗ್ಗೆ ಮುಖ್ಯಸ್ಥ ಥಾಮಸ್ ವೂಡಿ ಅವರಿಗೆ ಈಗ ಎಲ್ಲಿಲ್ಲದ ಸಂತಸ,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News