ಪ್ರತಿಸ್ಪರ್ಧಿ ಟೆಡ್ ಪತ್ನಿಯ ‘ರಹಸ್ಯ’ ಬಹಿರಂಗಪಡಿಸುವ ಬೆದರಿಕೆ ಹಾಕಿದ ಟ್ರಂಪ್
ವಾಷಿಂಗ್ಟನ್ : ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗುವ ರೇಸಿನಲ್ಲಿರುವಪ್ರಮುಖರಾದ ಡೊನಾಲ್ಡ್ ಟ್ರಂಪ್, ತಮ್ಮಪ್ರತಿಸ್ಪರ್ಧಿ ಹಾಗೂ ಟೆಕ್ಸಾಸ್ ಸೆನೇಟರ್ ಟೆಡ್ ಕ್ರೂರ್ ಮೇಲಿನ ತಮ್ಮ ವೈರತ್ವವನ್ನು ಮಂಗಳವಾರ ಇನ್ನೊಂದು ಮಟ್ಟಕ್ಕೇರಿಸಿದ್ದು ಈ ಬಾರಿ ಕ್ರೂರ್ ಅವರ ಪತ್ನಿಯನ್ನು ಗುರಿಯಾಗಿಸಿದ್ದಾರೆ.
ಟ್ರಂಪ್ ನಿನ್ನೆ ಟ್ವೀಟೊಂದನ್ನುಮಾಡಿ ಟೆಕ್ಸಾಸ್ ಸೆನೇಟರ್ ‘ಎಚ್ಚರಿಕೆಯಿಂದಿರಬೇಕೆಂದು’ ಇಲ್ಲದಿದ್ದಲ್ಲಿ ಅವರ ಪತ್ನಿ ಹೆಡೀ ಕ್ರೂರ್ ರಹಸ್ಯ ಬಹಿರಂಗಪಡಿಸುವುದಾಗಿ ಬೆದರಿಸಿದ್ದಾರೆ.
ಟ್ರಂಪ್ ವಿರೋಧಿ ಪಿಎಸಿ ಟಿವಿ ಜಾಹೀರಾತೊಂದರಲ್ಲಿ ಅವರಪತ್ನಿ ಮೆಲಾನಿಯಾ ನಗ್ನವಾಗಿ ಜಿಕ್ಯೂ ಮ್ಯಾಗಜೀನಿನ ಫೊಟೋಶೂಟಿಗಾಗಿ ಪೋಸ್ ನೀಡಿದ ಚಿತ್ರವನ್ನು ಉಪಯೋಗಿಸಿದ ವಿಚಾರವಾಗಿ ಟ್ರಂಪ್ ತಮ್ಮ ಟ್ವೀಟಿನಲ್ಲಿ ಕ್ರೂರ್ ಅವರನ್ನು ತೀವ್ರವಾಗಿ ಟೀಕಿಸಿದ್ದಾರೆ.
‘‘ಟೆಡ್ ಕ್ರೂರ್ ಈಗಷ್ಟೇ ಮೆಲಾನಿಯಾ ಚಿತ್ರವನ್ನುತಮ್ಮಜಾಹೀರಾತಿನಲ್ಲಿ ಬಳಸಿದ್ದಾರೆ. ಎಚ್ಚರಿಕೆಯಿಂದಿರಿ ಟ್ರೆಡ್, ಇಲ್ಲದಿದ್ದಲ್ಲಿ ನಾನು ನಿಮ್ಮ ಪತ್ನಿಯ ರಹಸ್ಯ ಬಹಿರಂಗಪಡಿಸಬೇಕಾದೀತು,’’ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ತಕ್ಷಣ ಇನ್ನೊಂದು ಟ್ವೀಟ್ ಮುಖಾಂತರ ಸ್ಪಂದಿಸಿದ ಟೆಡ್- ‘‘ನಿಮ್ಮ ಹೆಂಡತಿಯ ಚಿತ್ರ ನಾವು ಹಾಕಿದ್ದಲ್ಲ. ನೀವು ಹೆಡೀಯವರ ಮೇಲೆ ದಾಳಿ ನಡೆಸಲು ಯತ್ನಿಸಿದರೆ ನೀವು ನಾವು ಎಣಿಸಿದ್ದಕ್ಕಿಂತ ಹೆಚ್ಚು ಹೇಡಿ, ಕ್ಲಾಸ್‌ಲೆಸ್,’’ಎಂದು ಹೇಳಿದ್ದಾರೆ.
ಹೆಡೀ ಕ್ರೂರ್ ಗೋಲ್ಡ್ ಮ್ಯಾನ್ ಸ್ಯಾಚ್ಸ್ ಕಂಪೆನಿಯಲ್ಲಿ ಸೀನಿಯರ್ ಎಕ್ಸಿಕ್ಯೂಟಿವ್ ಆಗಿದ್ದು ತಮ್ಮ ಪತಿಯ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲು ರಜೆಯ ಮೇಲಿದ್ದಾರೆ.
ಈ ಹಿಂದೆ ತಮ್ಮವಿರುದ್ಧದ ಜಾಹೀರಾತು ಪ್ರಚಾರಕ್ಕೆ ಹಣ ಸಂದಾಯ ಮಾಡಿದ್ದಾರೆನ್ನಲಾದ ರಿಕ್ಕೆಟ್ಟ್ ಕುಟುಂಬವನ್ನು ಟ್ರಂಪ್ ಗುರಿಯಾಗಿಸಿದ್ದರು.