×
Ad

ಉತ್ತರ ಪ್ರದೇಶದಲ್ಲಿ ಗೆಲ್ಲಬೇಕಾದರೆ ಬ್ರಾಹ್ಮಣರ ಮನವೊಲಿಸಬೇಕಾಗಿದೆ: ಪ್ರಶಾಂತ್ ಕಿಶೋರ್

Update: 2016-03-23 13:24 IST

ಹೊಸದಿಲ್ಲಿ, ಮಾ.23: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನ್ನು ಪುನಶ್ಚೇತನಗೊಳಿಸುವ ವಿಚಾರದಲ್ಲಿ ಚುನಾವಣಾ ರಣತಂತ್ರಜ್ಞ ಪ್ರಶಾಂತ್ ಕಿಶೋರ್ ಪಾರ್ಟಿಯ ಬ್ರಾಹ್ಮಣರ ಕುರಿತು ಚರ್ಚೆಯನ್ನು ಹುಟ್ಟು ಹಾಕಿದ್ದಾರೆ.

2017ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಬ್ರಾಹ್ಮಣರ ಮನವೊಲಿಸಬೇಕಾಗಿದೆ ಎಂದು ತನ್ನ ಸಲಹೆ ನೀಡಿದ್ದಾರೆ. ಅವರು ಈ ಸಲಹೆಯನ್ನು ರಾಹುಲ್ ಗಾಂಧಿ ಸಹಿತ ಇತರ ನಾಯಕರ ಉಪಸ್ಥಿತಿಯಲ್ಲಿ ನೀಡಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಬಾಬರಿ ಮಸೀದಿ ಪ್ರಕರಣಕ್ಕಿಂತ ಮೊದಲು ಬ್ರಾಹ್ಮಣರು ಕಾಂಗ್ರೆಸ್‌ನ ಓಟು ಬ್ಯಾಂಕ್ ಆಗಿದ್ದರೆಂಬುದು ಕಿಶೋರ್‌ರ ಐಡಿಯಾ ಆಗಿದೆ ಮತ್ತು ಈ ಬಗ್ಗೆ ಮತ್ತೆ ಕಾಂಗ್ರೆಸ್ ಗಮನಹರಿಸಬೇಕಿದೆ ಎಂದು ಕಿಶೋರ್ ಹೇಳಿರುವುದಾಗಿ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಕಿಶೋರ್ ಕಾಂಗ್ರೆಸ್ ಚುನಾವಣೆ ಅಪ್ಪರ್ ಕಾಸ್ಟ್ ಆಧಾರದಲ್ಲಿ ನಡೆದಿದ್ದರಿಂದ ಸಮಾಜವಾದಿ ಪಾರ್ಟಿ ಮತ್ತು ಬಹುಜನ ಸಮಾಜವಾದಿ ಪಾರ್ಟಿ ಜನ್ಮತಳೆದಿದೆ ಎಂದಿದ್ದಾರೆ. ಪಕ್ಷದ ಕೆಲವು ನಾಯಕರು ಕಿಶೋರ್ ಅಭಿಪ್ರಾಯಕ್ಕೆ ಸಹಮತವನ್ನೂ ಸೂಚಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಉತ್ತರ ಪ್ರದೇಶದಲ್ಲಿ ಶೇ. ಹತ್ತರಷ್ಟು ಬ್ರಾಹ್ಮಣ ಜನಸಂಖ್ಯೆಯಿದೆ. ಬಾಬರಿ ಮಸೀದಿ ಪ್ರಕರಣದವರೆಗೂ ಇದು ಕಾಂಗ್ರೆಸ್ ಪಾಳಯದಲ್ಲಿತ್ತು. ಮತ್ತುಆನಂತರ ಇದು ಬಿಜೆಪಿ ತೆಕ್ಕೆಯನ್ನು ಸೇರಿಕೊಂಡಿತು. ಆದರೆ ಲೋಕ್ ನೀತಿ ಸರ್ವೇ ಪ್ರಕಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಬ್ರಾಹ್ಮಣ ವೋಟ್ ಬ್ಯಾಂಕ್‌ನಲ್ಲಿ ಕಡಿಮೆಯಾಗಿದೆ. 2002ರಲ್ಲಿ(ಶೆ. 50) ಮತ್ತು 2007ರಲ್ಲಿ (ಶೆ.44) ನಡುವೆ ಶೇ. ಆರರಷ್ಟು ಬ್ರಾಹ್ಮಣ ವೋಟ್ ಕಡಿತವಾಗಿವೆ. 2007ರಿಂದ 2012(ಶೇ.38) ನಡುವೆ ಶೇ. ಆರರಷ್ಟು ವೋಟ್ ಕಡಿಮೆಯಾಗಿವೆ. ಸಮಾಜವಾದಿ ಪಾರ್ಟಿ2012ರ ವಿಧಾನಸಭಾ ಚುನಾವಣೆಯನ್ನು ಗೆದ್ದು ಸರಕಾರ ರಚಿಸಿತು. ಅದಕ್ಕೆ ಶೇ. 19ರಷ್ಟು ಬ್ರಾಹ್ಮಣ ವೋಟು ಬಿದ್ದಿವೆ. ಬಿಎಸ್ಪಿಗೆ ಶೇ.19ರಷ್ಟು ವೋಟು ಬಿದ್ದಿವೆ. ಓರ್ವ ನಾಯಕನ ಪ್ರಕಾರ ಈ ಅಂಕಿ ಅಂಶಗಳುಕಾಂಗ್ರೆಸ್‌ನಲ್ಲಿ ನಿರೀಕ್ಷೆಯನ್ನು ಸೃಷ್ಟಿಸಿವೆ.

ಕಾಂಗ್ರೆಸ್ ಕಳೆದ ಇಪ್ಪತ್ತೇಳು ವರ್ಷಗಳಿಂದ ಅಧಿಕಾರದಿಂದ ದೂರವಿದೆ. ಮಾಜಿ ಸಂಸತ್ ಸದಸ್ಯ ಹಾಗೂ ಕಾಂಗ್ರೆಸ್ ನಾಯಕರೊಬ್ಬರು "ಬ್ರಾಹ್ಮಣರ ಈ ಫಲಿತಾಂಶವನ್ನು ಬಹಳ ಸುಲಭವಾಗಿ ವಿಭಜಿಸಲು ಸಾಧ್ಯವಿದೆ" ಎಂದು ಅವರು ಹೇಳಿದ್ದಾರೆ.

ಈಗಿನ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ಗೆ ಯಾವುದಾದರೊಂದು ವಿಶೇಷ ಜಾತಿಯ ಬೆಂಬಲವಿಲ್ಲ. ಇದು ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಎದುರಿಸುತ್ತಿರುವ ಬಹುದೊಡ್ಡ ಕೊರತೆಯಾಗಿದೆ. ನಾವು ಎಷ್ಟರವರೆಗೆ ಕೋರ್ ವೋಟ್‌ಬ್ಯಾಂಕ್ ಮಾಡುವುದಿಲ್ಲವೋ ಅಷ್ಟರವರೆಗೆ ಮುಸ್ಲಿಮರು ನಮ್ಮ ಜೊತೆ ಬರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಅವರು ಕೇವಲ ಗೆಲ್ಲುವವರಿಗೆ ಮಾತ್ರವೇ ವೋಟು ನೀಡುತ್ತಾರೆ. ಬ್ರಾಹ್ಮಣರ ವೋಟಿನ ಕುರಿತ ಐಡಿಯಾ ಹೊಸತೇನಲ್ಲ. ಸಮಾಜವಾದಿಪಕ್ಷ, ಬಿಜೆಪಿ ಮತ್ತು ಬಿಎಸ್ಪಿ ಚುನಾವಣೆಗಿಂತ ಮೊದಲು ಉತ್ತರ ಪ್ರದೇಶದಲ್ಲಿ ಬ್ರಾಹ್ಮಣರ ಸಮ್ಮೇಳನ ನಡೆಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News